Ad Widget .

ವರ ಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ಗಿಪ್ಟ್ ನೀಡಲು ಮುಂದಾದ ರಾಜ್ಯ ಸರ್ಕಾರ| ಗೃಹಲಕ್ಷ್ಮಿ ಅಲ್ಲ, ಹಾಗಾದ್ರೆ ಏನದು ಗೊತ್ತಾ?

ಸಮಗ್ರ ನ್ಯೂಸ್: ರಾಜ್ಯದ ಜನತೆಗೆ ಐದು ಗ್ಯಾರಂಟಿಗಳನ್ನು ನೀಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಈಗಾಗಲೇ ಎರಡು ಗ್ಯಾರಂಟಿಗಳನ್ನು ಜನರಿಗೆ ನೀಡಿದೆ. ಮೂರನೇ ಗ್ಯಾರಂಟಿ ಜಾರಿಗೆ ದಿನಾಂಕವನ್ನು ಘೋಷಣೆ ಮಾಡಿದೆ. ಈ ನಡುವೆ ಮತ್ತೊಂದು ಗ್ಯಾರಂಟಿಯನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

Ad Widget . Ad Widget .

ವರಮಹಾಲಕ್ಷ್ಮಿ ಹಬ್ಬದ ದಿನ ಮಹಿಳೆಯರಿಗೆ ಅರಿಶಿಣ, ಕುಂಕುಮ, ಹಸಿರು ಬಳೆ ನೀಡುವಂತೆ ಸುತ್ತೋಲೆ ಹೊರಡಿಸಿದೆ. ಮುಜರಾಯಿ ಇಲಾಖೆ ವ್ಯಾಪ್ತಿಯ ಎಲ್ಲಾ ದೇವಸ್ಥಾನಗಳಲ್ಲಿ ಹಸಿರು ಗಾಜಿನ ಬಳೆ, ಅರಿಶಿಣ, ಕುಂಕುಮ ದೇವರ ಮುಂದೆ ಪೂಜೆ ಮಾಡಿ ಕೊಡುವಂತೆ ಆದೇಶ ಹೊರಡಿಸಲಾಗಿದೆ.

Ad Widget . Ad Widget .

ಆಗಸ್ಟ್​ 25ನೇ ತಾರೀಖು ಶುಕ್ರವಾರ ರಾಜ್ಯದಾದ್ಯಂತ ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಲಾಗುತ್ತದೆ. ಹಬ್ಬದ ದಿನ ದೇವಸ್ಥಾನಕ್ಕ ಬರುವ ಮಹಿಳಾ ಭಕ್ತರಿಗೆ ಸರ್ಕಾರದ ಕುಂಕುಮ ಭಾಗ್ಯ ನೀಡಲು ಮುಂದಾಗಿದೆ.

ಧಾರ್ಮಿಕ ದತ್ತ ಇಲಾಖೆ ಆಯುಕ್ತರು ಆದೇಶವನ್ನು ಹೊರಡಿಸಿ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ

Leave a Comment

Your email address will not be published. Required fields are marked *