ಸಮಗ್ರ ನ್ಯೂಸ್: ಉಪ್ಪಿನಂಗಡಿ ಸಮೀಪದ ಪೆದಮಲೆಯ ವಿದ್ಯಾರ್ಥಿಯೋರ್ವ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟ ಘಟನೆ ಆ. 21ರಂದು ರಾತ್ರಿ ವರದಿಯಾಗಿದೆ.
ಪೆದಮಲೆ ನಿವಾಸಿ ಸಮದ್ ಹಾಜಿ ರವರ ಪುತ್ರ ಅಹ್ಮದ್ ಸಹದ್(15) ಉಪ್ಪಿನಂಗಡಿಯ ಇಂಡಿಯನ್ ಸ್ಕೂಲ್ ನ SSLC ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಸಹದ್ ಕಳೆದ ಹಲವು ದಿನಗಳಿಂದ ಬೆಂಗಳೂರಿನ ನಾರಾಯಣ ಹೃದಯಾಳಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಶಾಲಾ ಚಟುವಟಿಕೆಗಳಲ್ಲಿ ಬಹಳ ಚುರುಕಿನ ಮತ್ತು ಪ್ರತಿಭಾವಂತ ವಿದ್ಯಾರ್ಥಿಯನ್ನು ಕಳೆದುಕೊಂಡಂತಾಗಿದೆ. ಇನ್ನು ಸಂತಾಪ ಸೂಚಕವಾಗಿ ಆ.22ರಂದು ಇಂಡಿಯನ್ ಸ್ಕೂಲ್ ಉಪ್ಪಿನಂಗಡಿಗೆ ರಜೆ ಘೋಷಿಸಲಾಗಿದ್ದು, ಆ. 22 ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಆ. 23ಕ್ಕೆ ಮುಂದೂಡಲಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.