Ad Widget .

ಸುಳ್ಯ: ತಮಿಳುನಾಡು ಮೂಲದ ದಂಪತಿ ಆತ್ಮಹತ್ಯೆ

ಸಮಗ್ರ ನ್ಯೂಸ್: ತಮಿಳುನಾಡು ಮೂಲದ ರಬ್ಬರ್ ಕಾರ್ಮಿಕ ದಂಪತಿ ತಾಲೂಕಿನ ದೇವಚಳ್ಳ ಗ್ರಾಮದ ಎಲಿಮಲೆಯ‌ ಮನೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ವರದಿಯಾಗಿದೆ.

Ad Widget . Ad Widget .

ಎಲಿಮಲೆಯ ಪರಿಸರದಲ್ಲಿ ಕಳೆದ ಅನೇಕ‌ ವರ್ಷಗಳಿಂದ ಟ್ಯಾಪಿಂಗ್ ಮಾಡುತ್ತಿದ್ದ ರಾಜನ್ ಮತ್ತು ಅವರ ಪತ್ನಿ ಕಳೆದ ಕೆಲ ಸಮಯಗಳಿಂದ ರಬ್ಬರ್ ತೋಟವನ್ನು ಖರೀದಿಸಿ ಟ್ಯಾಪಿಂಗ್ ಮಾಡಿ ಜೀವನ ಸಾಗಿಸುತ್ತಿದ್ದರೆನ್ನಲಾಗಿದೆ.

Ad Widget . Ad Widget .

ಮನೆಯಲ್ಲಿ ದಂಪತಿಗಳು ಮಾತ್ರ ಇದ್ದು, ಇಂದು ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಮೃತರು ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.

ರಾಜನ್ ರವರು ಕಳೆದ ಕೆಲ ಸಮಯದಿಂದ‌ ಅನಾರೋಗ್ಯಕ್ಕೂ ತುತ್ತಾಗಿದ್ದರು ಎಂದು ಹೇಳಲಾಗಿದೆ.

Leave a Comment

Your email address will not be published. Required fields are marked *