Cauvery dispute| ಕಾವೇರಿ ನೀರು ಹಂಚಿಕೆ ವಿವಾದ| ನಾಳೆ(ಆ.24) ಸರ್ವಪಕ್ಷ ಸಭೆ ಕರೆದ ಸಿಎಂ

ಸಮಗ್ರ ನ್ಯೂಸ್: ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿಚಾರ ಕುರಿತು ಆಗಸ್ಟ್ 23 ರಂದು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವಪಕ್ಷಗಳ ಸಭೆ ಕರೆದಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

Ad Widget ... ..

ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಕಾವೇರಿ, ಮಹದಾಯಿ ಅಂತರ್ ರಾಜ್ಯ ವಿಚಾರಕ್ಕಾಗಿ ಸರ್ವಪಕ್ಷ ಸಭೆ ಕರೆಯಲಾಗಿದೆ. ಈ ಸಭೆಗೆ ನಮ್ಮ ಸಂಸದರೂ ಬರುತ್ತಾರೆ. ವಿಧಾನಸೌಧದಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ನಡೆಸಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ ಎಂದು ಹೇಳಿದರು.

Ad Widget

ಈ ಸಂದರ್ಭದಲ್ಲಿ ಅನೇಕ ವಿಚಾರಗಳ ಬಗ್ಗೆಚರ್ಚೆ ನಡೆಸಲಾಗುವುದು. ಸುಪ್ರೀಂ ಕೊರ್ಟ್​ಗೆ ತಮಿಳುನಾಡು ಅರ್ಜಿಯ ವಿರುದ್ಧ ಅಪೀಲ್ ಹಾಕಲು ಆದೇಶ ಮಾಡಿದ್ದೇವೆ. ಕಾನೂನು ವಿಚಾರಗಳನ್ನು ವಕೀಲರಿಗೆ ಬಿಟ್ಟಿದ್ದೇವೆ. ಕಾವೇರಿ ನದಿಯಲ್ಲಿ ಒಳ ಹರಿವು ಕಡಿಮೆ ಆಗಿದೆ. ಕೃಷ್ಣಾ ತುಂಬಿದ್ದರೂ ಕೂಡ ಒಳಹರಿವಿನಲ್ಲಿ ತುಂಬಾ ಕಡಿಮೆ ನೀರು ಇದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಸರ್ವಪಕ್ಷಗಳ ಸಭೆಯಲ್ಲಿಸರ್ಕಾರದ ಪರವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಕಾನೂನು ಸಚಿವ ಹೆಚ್.ಕೆ ಪಾಟೀಲ್ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ. ವಿಪಕ್ಷಗಳಿಂದ ಯಾರೆಲ್ಲ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.

Leave a Comment

Your email address will not be published. Required fields are marked *