ದಿ. ಸೌಜನ್ಯ ಮನೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಭೇಟಿ| ಘಟನೆಯ ಸಂಪೂರ್ಣ ಮಾಹಿತಿ ಪಡಕೊಂಡ ನಾಗಣ್ಣ

ಸಮಗ್ರ ನ್ಯೂಸ್: ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಧರ್ಮಸ್ಥಳದ ಪಾಂಗಾಳ ನಿವಾಸಿ ಸೌಜನ್ಯ ಮನೆಗೆ ಹಾಗೂ ಘಟನಾ ಸ್ಥಳಕ್ಕೆ ಆಗಸ್ಟ್ 20 ರಂದು ಸಂಜೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷರಾದ ನಾಗಣ್ಣ ಗೌಡ ಭೇಟಿ ನೀಡಿದರು.

Ad Widget ... ..

ಮೊದಲು ಕೊಲೆಯಾಗಿ ಪತ್ತೆಯಾದ ನೇತ್ರಾವತಿ ಮಣ್ಣಸಂಕ ಪ್ರದೇಶಕ್ಕೆ ಭೇಟಿ ನೀಡಿ ಧರ್ಮಸ್ಥಳ ಪೊಲೀಸರಿಂದ ಮಾಹಿತಿ ಪಡೆದುಕೊಂಡರು. ನಂತರ ಸೌಜನ್ಯಳ ಪಾಂಗಾಳ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ನೀಡಿ ಬಳಿಕ ಘಟನೆಗಳ ಬಗ್ಗೆ ಮಾತುಕತೆ ನಡೆಸಿದರು.

Ad Widget

ನಾಗಣ್ಣ ಗೌಡ ಜೊತೆಯಲ್ಲಿ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಮತ್ತು ತಂಡ , ಸಿಡಿಪಿಓ ಪ್ರೀಯಾ ಅಗ್ನೇಸ್ ಮತ್ತಿತರರು ಭಾಗಿಯಾಗಿದ್ದರು. ಅಲ್ಲಿಂದ ನೇರ ಬೆಳ್ತಂಗಡಿ ಐಬಿ ಗೆ ಅಧಿಕಾರಿಗಳೊಂದಿಗೆ ನಡೆಯುವ ಸಭೆಗೆ ತೆರಳಿದರು.

Leave a Comment

Your email address will not be published. Required fields are marked *