ಸಮಗ್ರ ನ್ಯೂಸ್: ಚಿಕ್ಕಮಗಳೂರು ತಾಲೂಕಿನ ಮೇಲಿನ ಹಲುವತ್ತಿ ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿ ಬೃಹತ್ ಗಾತ್ರದ ಜಿಂಕೆ ಶಿಕಾರಿ ಮಾಡಿರುವ ಪ್ರಕರಣ ದಾಖಲಾಗಿದೆ.
ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಮುತ್ತೊಡಿ ಪ್ರಾದೇಶಿಕ ವಲಯದಲ್ಲಿ ಬೃಹತ್ ಗಾತ್ರದ ಜಿಂಕೆ ಬೇಟೆ ಮಾಡಿರುವುದು ಬೆಳಕಿಗೆ ಬಂದಿದೆ. ಶಿಕಾರಿ ಮಾಡಿ ಅಲ್ಲೇ ಬಾಡೂಟ ಮಾಡಿದ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದು ಪ್ರಾದೇಶಿಕ ಅರಣ್ಯ ವಿಭಾಗದ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಸುಮಾರು 25ಕೆಜಿ ತೂಕದ ಜಿಂಕೆಯನ್ನು ಶಿಕಾರಿ ಮಾಡಿರುವ ಆರೋಪ ವ್ಯಕ್ತವಾಗಿದೆ. ಈ ಆರೋಪದ ಮೇಲೆ 8ಕೆಜಿ ಜಿಂಕೆ ಮಾಂಸದ ಜೊತೆಗೆ ನಾಡ ಬಂದೂಕನ್ನು ವಶಪಡಿಸಲಾಗಿದೆ. ಆರೋಪಿ ಮೊಹಮ್ಮದ್ ಶಕೀಲ್ ಸೇರಿದಂತೆ ಆರು ಮಂದಿಯನ್ನು ಬಂದಿಸಲಾಗಿದೆ. ಪಾರ್ಟಿ ಸ್ಥಳದಲ್ಲಿ NGO ಸದಸ್ಯರಿದ್ದರು ಇದ್ದರು ಎಂದು ಶಂಕಿಸಲಾಗಿದೆ.