Ad Widget .

ವಾಷಿಂಗ್ಟನ್:ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್‌ಗಳ ಮೂಲಕ ಜನರ ಮನ ಸೆಳೆದಿದ್ದ ಚೀಮ್ಸ್ ನಾಯಿ ಇನ್ನಿಲ್ಲ

ಸಮಗ್ರ ನ್ಯೂಸ್: ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್‌ಗಳ (Mems) ಮೂಲಕ ಜನರ ಮಾನಸೆಳೆದಿದ್ದ ಚೀಮ್ಸ್ (Cheems) ನಾಯಿ ಸಾವನ್ನಪ್ಪಿರುವುದಾಗಿ ಅದರ ಮಾಲೀಕರು ತಿಳಿಸಿದ್ದಾರೆ.

Ad Widget . Ad Widget .

ಹಾಸ್ಯಮಯ ಸನ್ನಿವೇಶಗಳನ್ನು ಮೀಮ್ಸ್‌ಗಳ ಮೂಲಕ ರಚಿಸುವ ಸಂದರ್ಭದಲ್ಲಿ ಚೀಮ್ಸ್‌ನ ವೈರಲ್ ಫೋಟೋವನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಆದರೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಚೀಮ್ಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸಂಧರ್ಭದಲ್ಲಿ ಮಲಗಿದ್ದು, ಬಳಿಕ ಏಳಲಿಲ್ಲ ಎಂದು ಮಾಲೀಕರು ತಿಳಿಸಿದ್ದಾರೆ.

Ad Widget . Ad Widget .

ಚೀಮ್ಸ್‌ನ ಹಲವಾರು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಮಾಲೀಕರು, ಆ. 18ರಂದು ನಾಯಿಯನ್ನು ಕಿಮೋಥೆರಪಿಗೆ ಒಳಪಡಿಸಲು ನಿರ್ಧರಿಸಿದ್ದರು ತುಂಬಾ ತಡವಾದ ಕಾರಣ ಚೀಮ್ಸ್‌ ಸಾವನ್ನಪ್ಪಿದೆ. ಮೂಲಗಳ ಪ್ರಕಾರ ಬಾಲ್ಟ್ಜ್ (Balltze) ಹೆಸರಿನ ನಾಯಿಯ ಫೋಟೋ 2017ರಲ್ಲಿ ವೈರಲ್ ಆಗಿತ್ತು, ಬಳಿಕ ಭಾರೀ ಪ್ರಮಾಣದ ಮೀಮ್ಸ್‌ಗೆ ಬಳಕೆಯಾಗಿತ್ತು. ಚೀಮ್ಸ್ ಅನ್ನು ಹೋಲುತ್ತದೆ ಎಂದು ಕಾಮೆಂಟ್ ಮಾಡಿದ್ದು, ಅಲ್ಲಿಂದ ಬಾಲ್ಟ್ಜ್ ಇಂಟರ್ನೆಟ್ ನಲ್ಲಿ ಭಾರೀ ಖ್ಯಾತಿ ಗಳಿಸಿತ್ತು.

ಚೀಮ್ಸ್ ಸಾವು ಲಕ್ಷಾಂತರ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಚೀಮ್ಸ್ ಅನಾರೋಗ್ಯಕ್ಕೆ ಒಳಗಾದಾಗ ಅದಕ್ಕೆ ಚಿಕಿತ್ಸೆ ನೀಡಿದ ವೆಟ್ಸ್ ಮಾಲೀಕರು ಧನ್ಯವಾದ ಹೇಳಿದ್ದಾರೆ. ಚೀಮ್ಸ್ ಚಿಕಿತ್ಸೆಗಾಗಿ ಸಂಗ್ರಹಿಸಲಾಗಿದ್ದ ಹಣವನ್ನು ಪ್ರಾಣಿ ಕಲ್ಯಾಣ ಸಂಸ್ಥೆಗಳಿಗೆ ನೀಡಲಾಗುವುದು ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *