Ad Widget .

ಶಾಲಾ ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್| ಮುಂದಿನ ತಿಂಗಳಿನಿಂದ ‘ಶುಚಿ’ ಯೋಜನೆ ಮತ್ತೆ ಜಾರಿ

ಸಮಗ್ರ ನ್ಯೂಸ್: ಕರ್ನಾಟಕದ ಎಲ್ಲಾ ಸರ್ಕಾರಿ ಅನುದಾನಿತ ಶಾಲೆಗಳಲ್ಲಿನ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ನ್ಯಾಪ್ಕಿನ್ ಒದಗಿಸುವ ಶುಚಿ ಯೋಜನೆಯು ಸೆಪ್ಟೆಂಬರ್ 10 ರಿಂದ ಮತ್ತೆ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿದುಬಂದಿದೆ.

Ad Widget . Ad Widget .

ಯುವತಿಯರಲ್ಲಿ ಮುಟ್ಟಿನ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲು 2014 ರಲ್ಲಿ ಶುಚಿ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಆದರೆ, ಕೋವಿಡ್ ನಂತರ ಯೋಜನೆ ಸ್ಥಗಿತಗೊಂಡಿತ್ತು. ಇದರಿಂದ ಹಣ ನೀಡಿ ಸ್ಯಾನಿಟರಿ ನ್ಯಾಪ್ಕಿನ್ ಖರೀದಿ ಮಾಡಲು ಸಾಧ್ಯವಾಗದೆ ಬಡಮಕ್ಕಳು ಸಂಕಷ್ಟ ಸಿಕುವಂತಾಗಿತ್ತು. ಇದೀಗ ಸರ್ಕಾರ ಯೋಜನೆ ಪುನರಾರಂಭ ಮಾಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಮಕ್ಕಳ ಮುಗದಲ್ಲಿ ಸಂತಸ ಮೂಡುವಂತೆ ಮಾಡಿದೆ.

Ad Widget . Ad Widget .

ರಾಜ್ಯದ ಸುಮಾರು 18 ಲಕ್ಷ ಹೆಣ್ಣು ಮಕ್ಕಳು ಈ ಯೋಜನೆಯಿಂದ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ, 2023-24 ನೇ ಸಾಲಿನ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ಘಟಕದಲ್ಲಿ ಪ್ರತಿ ಹೆಣ್ಣುಮಕ್ಕಳಿಗೆ ಹತ್ತು ನ್ಯಾಪ್ಕಿನ್ಗಳನ್ನು ಹೊಂದಿರುವ ಎಂಟು ಪ್ಯಾಕೆಟ್ಗಳನ್ನು ನೀಡಲಾಗುತ್ತದೆ

Leave a Comment

Your email address will not be published. Required fields are marked *