ಸಮಗ್ರ ನ್ಯೂಸ್: ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಪತ್ನಿ ಗಂಡನಿಗೆ ಕೈಕೊಟ್ಟು ಎಸ್ಕೇಪ್ ಆಗಿದ್ದಾಳೆ ಎಂದು ಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ಧಾನೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿ ರಮೇಶ್ ಕಳೆದ ಎರಡು ತಿಂಗಳ ಹಿಂದೆ ಮದುವೆಯಾಗಿದ್ದರು. ರಮೇಶ್ ಜೊತೆಗೆ ಚೆನ್ನಾಗಿಯೇ ಇದ್ದ ಪತ್ನಿ, ಇದೇ ಆಗಸ್ಟ್ 12ರಂದು ಬೆಳಗ್ಗೆ ಪತಿ ರಮೇಶ್ನನ್ನು ಸ್ನಾನ ಮಾಡುವಂತೆ ಬಾತ್ ರೂಮ್ಗೆ ಕಳುಹಿಸಿ, ಆತ ಒಳಗೆ ಹೋದ ತಕ್ಷಣ ಪತ್ನಿ ಹೊರಗಿನಿಂದ ಬಾತ್ರೂಮ್ ಬಾಗಿಲು ಹಾಕಿಕೊಂಡು ಮನೆಯ ಬಾಗಿಲನ್ನೂ ಲಾಕ್ ಮಾಡಿ ಎಸ್ಕೇಪ್ ಆಗಿದ್ದಾಳೆ.
ಈ ಬಗ್ಗೆ ರಮೇಶ್ ಆರ್.ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪತ್ನಿ ತನ್ನ ಸ್ನೇಹಿತ ಕಾರ್ತಿಕ್ ಜೊತೆಗೆ ಹೋಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾಗಿರುವ ರಮೇಶ್ ಪತ್ನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.