Ad Widget .

ಸೌಜನ್ಯ ಪ್ರಕರಣ ಮರುತನಿಖೆ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ, ಕಾನೂನಾತ್ಮಕವಾಗಿ ಮುಗಿದ ಅಧ್ಯಾಯ| ಸಂಚಲನ ಸೃಷ್ಟಿಸಿದ ಗೃಹಸಚಿವ ಪರಮೇಶ್ವರ್ ಹೇಳಿಕೆ

ಸಮಗ್ರ ನ್ಯೂಸ್: ಧರ್ಮಸ್ಥಳ ಸಮೀಪದ ಮಣ್ಣಸಂಕ ಬಳಿ 11 ವರ್ಷಗಳ ಹಿಂದೆ ಸಂಭವಿಸಿದ ಸೌಜನ್ಯಾ ಅತ್ಯಾಚಾರ, ಹತ್ಯೆ ಪ್ರಕರಣವನ್ನು ಮರು ತನಿಖೆಗೊಳಪಡಿಸಲು ತೀವ್ರ ಹೋರಾಟ ನಡೆಯುತ್ತಿರುವಾಗಲೇ ಸರಕಾರ ಮರು ತನಿಖೆ ಅಸಾಧ್ಯ ಎಂದು ಹೇಳಿದೆ.

Ad Widget . Ad Widget .

ಈ ಕುರಿತು ಮಾತನಾಡಿರುವ ಗೃಹ ಸಚಿವ ಜಿ. ಪರಮೇಶ್ವರ, ಈ ಪ್ರಕರಣ ಕಾನೂನಾತ್ಮಕವಾಗಿ ಮುಗಿದು ಹೋಗಿದೆ. ಪ್ರಕರಣಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಸೌಜನ್ಯಾ ಹತ್ಯೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ವಿವಿಧ ವೇದಿಕೆಗಳಲ್ಲಿ ಹರಡುತ್ತಿರುವ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

Ad Widget . Ad Widget .

ಶುಕ್ರವಾರ ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಪರಮೇಶ್ವರ್‌ ಪ್ರಕರಣದ ಮರುತನಿಖೆ ಅಸಾಧ್ಯ ಎಂದು ಹೇಳಿದ್ದಾರೆ. ಪ್ರಕರಣವನ್ನು ಪುನಃ ತೆರೆಯುವ ಯಾವುದೇ ಪ್ರಸ್ತಾಪ ಸರ್ಕಾರ ಹೊಂದಿಲ್ಲ ಎಂದು ಅವರು ಸ್ಪಷ್ಟಪಡಿಒಸಿದ್ದಾರೆ. ದೇಶದ ಪರಮೋಚ್ಚ ತನಿಖಾ ಸಂಸ್ಥೆ ಸಿಬಿಐಯೇ ತನಿಖೆ ನಡೆಸಿದ ಬಳಿಕ ತಾಂತ್ರಿಕವಾಗಿ ಮತ್ತು ಕಾನೂನಾತ್ಮಕವಾಗಿ ಮರುತನಿಖೆ ಅಸಾಧ್ಯ ಎಂದು ಕೆಲವು ನ್ಯಾಯ ಪಂಡಿತರು ಕೂಡ ಹಿಂದೆಯೇ ಅಭಿಪ್ರಾಯಪಟ್ಟಿದ್ದರು.

ಪ್ರಕರಣದ ಆರೋಪಿ ಎಂದು ಬಂಧಿಸಲ್ಪಟ್ಟಿದ್ದ ಕಾರ್ಕಳದ ಬೈಲೂರಿನ ಸಂತೋಷ್‌ ರಾವ್‌ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಬಿಡುಗಡೆಯಾದ ಬಳಿಕ ಸೌಜನ್ಯಾ ಪ್ರಕರಣ ಮತ್ತೊಮ್ಮೆ ಮುನ್ನೆಲೆ ಬಂದಿದೆ. ಸೌಜನ್ಯಾಗೆ ನ್ಯಾಯ ಕೊಡಿಸಬೇಕೆಂದು ತೀವ್ರ ಹೋರಾಟ ನಡೆಯುತ್ತಿದೆ. ಈ ಮಾಸಾಂತ್ಯಕ್ಕೆ ಬೃಹತ್‌ ಸಭೆ ಆಯೋಜಿಸಲಾಗಿದೆ. ಇದರ ನಡುವೆಯೇ ಸ್ವತಃ ಗೃಹ ಸಚಿವರೇ ಮರು ತನಿಖೆ ಸಾಧ್ಯ ಇಲ್ಲ ಎಂದಿರುವುದರಿಂದ ಕೊನೆಗೂ ಸೌಜನ್ಯಾಳನ್ನು ಕೊಂದದ್ದು ಯಾರು ಎನ್ನುವುದು ಪ್ರಶ್ನೆಯಾಗಿಯೇ ಉಳಿಯಲಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಸೌಜನ್ಯ ಪ್ರಕರಣ ತೀವ್ರ ಚರ್ಚೆಯಲ್ಲಿರುವ ವಿಚಾರ.

Leave a Comment

Your email address will not be published. Required fields are marked *