ಭೂಮಿ ಮೋಹಕ್ಕೆ ಸೌಜನ್ಯಳ ಕೊಲೆಯಾಗಿದೆ‌| ಸ್ಪೋಟಕ ಹೇಳಿಕೆ ನೀಡಿದ ವಸಂತ ಬಂಗೇರ

ಸಮಗ್ರ ನ್ಯೂಸ್: ಉಜಿರೆಯ ಎಸ್ ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆಗೆ ಭೂಮಿ(ಜಮೀನು) ಮೋಹ ಕಾರಣ ಎಂದು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಹೊಸ ಬಾಂಬ್ ಸಿಡಿಸಿದ್ದಾರೆ. ಬೆಳ್ತಂಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಧರ್ಮಸ್ಥಳ ಹೆಗಡೆ ಪರಿವಾರದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

Ad Widget ... ..

ಹೆಗಡೆ ಪರಿವಾರದಂತಹ ಜಮೀನ್ದಾರರು ಹುಟ್ಟಲೇಬಾರದು, ತಾಲೂಕಿನ ಎಲ್ಲಾ ಜಮೀನುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

Ad Widget

ನನ್ನ ತಂದೆಯೂ ಜಮೀನ್ದಾರ ಆಗಿದ್ದರು, ಆದರೆ ಯಾರ್ಯಾರ ಜಮೀನನ್ನು ವಶಪಡಿಸಿಕೊಳ್ಳಲು ನಾನು ಬಿಡಲಿಲ್ಲ. ಆ ಕಾರಣಕ್ಕಾಗಿ ನನ್ನ ಹೆಸರಿನಲ್ಲಿ ಇಂದಿಗೂ ಯಾವುದೇ ಜಮೀನಿಲ್ಲ.

ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಗಳ ಪಕ್ಕದ ಜಮೀನುಗಳನ್ನೇ ವಶಪಡಿಸಿಕೊಳ್ಳುತ್ತಿದ್ದಾರೆ. ಬಿಟ್ಟಿಯಾಗಿ ಜಮೀನು ಸಿಕ್ಕಿದರೆ ಆ ಪರಿವಾರಕ್ಕೆ ಭಾರೀ ಖುಷಿ. ಹಣ ಕೊಟ್ಟು ಜಮೀನು ಪಡೆದಿದ್ದರೆ ಅವರಿಗೆ ಕೊಂಚ ಬಿಸಿ, ಇಂತಹ ಜಮೀನ್ದಾರಿಕೆಯನ್ನು ವಿರೋಧಿಸಬೇಕು.

ವಿರೋಧಿಸದೇ ಇದ್ದಲ್ಲಿ ಇಂತಹ ಘಟನೆಗಳು ನಡೆಯುತ್ತದೆ. ಸೌಜನ್ಯ ಪ್ರಕರಣವೂ ಇದೇ ಕಾರಣಕ್ಕೆ ನಡೆದಿರುವುದು. ಸೌಜನ್ಯ ಕೊಲೆ ನಡೆದಿರುವುದೂ ಜಾಗದ ವಿಚಾರಕ್ಕಾಗಿ ಎಂದು ಸಾರ್ವಜನಿಕ ವೇದಿಕೆಯಲ್ಲಿ ವಸಂತ ಬಂಗೇರ ಹೇಳಿದ್ದಾರೆ.

Leave a Comment

Your email address will not be published. Required fields are marked *