ಸಮಗ್ರ ನ್ಯೂಸ್: ಸುಬ್ರಹ್ಮಣ್ಯ ಭಾಗದಿಂದ ಅರಕಲಗೋಡು ಭಾಗಕ್ಕೆ ಕೃಷಿ ಉದ್ದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ದನ ಹಾಗೂ ಒಂದು ಕರುವನ್ನು ಸುಬ್ರಹ್ಮಣ್ಯ ಪೊಲೀಸರು ಆ. 17ರಂದು ಮಧ್ಯಾಹ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಮಧ್ಯಾಹ್ನ ಪೊಲೀಸ್ ತಪಾಸಣೆ ವೇಳೆ ಯಾವುದೇ ಅಗತ್ಯ ದಾಖಲೆಗಳಿಲ್ಲದೆ ಗೋವುಗಳನ್ನು ಸುಬ್ರಹ್ಮಣ್ಯ ಭಾಗದಿಂದ ಅರಕಲಗೋಡು ಭಾಗಕ್ಕೆ ಸಾಗಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ವಾಹನವನ್ನು ತಡೆದು ನಿಲ್ಲಿಸಲಾದರು ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಎರಡು ದನ, ಒಂದು ಕರುವನ್ನು ಮತ್ತು KA44 8819 ಸಂಖ್ಯೆಯ ವಾಹನವನ್ನು ವಶಕ್ಕೆ ಪಡೆಯಲಾದ ವಾಹನದಲ್ಲಿ ಮೂವರು ವ್ಯಕ್ತಿಗಳು ಇದ್ದರು ಎಂದು ತಿಳಿದು ಬಂದಿದೆ. ಹಿಂದೂ ಪರ ಸಂಘಟನೆ ಕಾರ್ಯಕರ್ತರು ಈ ಸಂಧರ್ಭದಲ್ಲಿ ಸಹಕರಿಸಿದ್ದರು.