Ad Widget .

ಚಿತ್ರರಂಗಕ್ಕೆ ಮತ್ತೊಂದು ಶಾಕ್| ಕಿರುತೆರೆ ನಟ ಪವನ್ ಹೃದಯಾಘಾತದಿಂದ ಸಾವು

ಸಮಗ್ರ ನ್ಯೂಸ್: ಇತ್ತೀಚೆಗೆ ಹೃದಯಾಘಾತ ಪ್ರಕರಣ ಹೆಚ್ಚುತ್ತಿದ್ದು, ಯುವವರ್ಗ ಹೃದಯಾಘಾತದಿಂದ ಮೃತಪಡುತ್ತಿದ್ದಾರೆ. ಇತ್ತೀಚೆಗೆ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಕೂಡ ಹಾರ್ಟ್​ ಅಟ್ಯಾಕ್​ನಿಂದ ಮೃತಪಟ್ಟಿದ್ದಾರೆ.

Ad Widget . Ad Widget .

ಈ ನೋವು ಕಡಿಮೆ ಆಗುವ ಮೊದಲೇ ಕಿರುತೆರೆ ನಟ ಮಂಡ್ಯ ಮೂಲದ ಪವನ್ ಅವರು ಮೃತಪಟ್ಟಿದ್ದಾರೆ. ಹಿಂದಿ ಹಾಗೂ ತಮಿಳು ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆದ ಮಂಡ್ಯ ಮೂಲದ ಪವನ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರಿಗೆ 25 ವರ್ಷ ವಯಸ್ಸಾಗಿತ್ತು.

Ad Widget . Ad Widget .

ಇಂದು (ಆಗಸ್ಟ್ 18) ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯ ಹರಿಹರಪುರ ಗ್ರಾಮದಲ್ಲಿ ಪವನ್ ಅಂತ್ಯಕ್ರಿಯೆ ನಡೆಯಲಿದೆ. ಅವರ ಕುಟುಂಬದವರು ಹಾಗೂ ಆಪ್ತರು ಅಂತ್ಯಕ್ರಿಯೆಯಲ್ಲಿ ಭಾಗಿ ಆಗುತ್ತಿದ್ದಾರೆ.

ಆಗಸ್ಟ್ 16ರಂದು ಪವನ್ ಮೃತಪಟ್ಟಿದ್ದಾರೆ. ಅವರಿಗೆ ತೀವ್ರ ಹೃದಯಾಘಾತ ಉಂಟಾಗಿದೆ. ಕೆಆರ್ ಪೇಟೆ ಮೂಲದವರಾದ ಪವನ್ ಮಹಾರಾಷ್ಟ್ರದಲ್ಲಿ ನೆಲೆಯೂರಿದ್ದರು. ಹಿಂದಿ, ತಮಿಳು ಕಿರುತೆರೆಯಲ್ಲಿ ಪವನ್ ನಟಿಸುತ್ತಿದ್ದರು. ಬೆಳ್ಳಿ ಪರದೆ ಮೇಲೆ ಮಿಂಚಬೇಕು ಎಂದು ಕನಸು ಕಂಡಿದ್ದರು. ಹುಟ್ಟೂರು ಎನ್ನುವ ಕಾರಣಕ್ಕೆ ಪವನ್ ಮೃತದೇಹವನ್ನು ಮಂಡ್ಯಕ್ಕೆ ತರಲಾಗಿದೆ. ಮಧ್ಯಾಹ್ನ 12 ಗಂಟೆ ವೇಳೆಗೆ ಅಂತ್ಯಕ್ರಿಯೆ ನೆರವೇರಲಿದೆ.

ಪವನ್ ಯಾವ ಧಾರಾವಾಹಿಯಲ್ಲಿ ನಟಿಸುತ್ತಿದ್ದರು ಎಂಬ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.

Leave a Comment

Your email address will not be published. Required fields are marked *