Ad Widget .

ಮಂಗಳೂರು: ಪ್ರತಿಷ್ಠಿತ ಆಸ್ಪತ್ರೆಯ ಬೆಡ್ ಮೇಲೆಯೇ ಒಳರೋಗಿಯಿಂದ ಭಿನ್ನ ಸಾಮರ್ಥ್ಯದ ಬಾಲಕಿ ಮೇಲೆ ಅತ್ಯಾಚಾರ| ಸೆಕ್ಸ್ ಮಾಡಿದ್ದನ್ನು ನೋಡಿದ್ದೇ ಕೃತ್ಯಕ್ಕೆ ಕಾರಣ!!

ಸಮಗ್ರ ನ್ಯೂಸ್: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಭಿನ್ನ ಸಾಮರ್ಥ್ಯ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಕುರಿತು ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃತ್ಯವೆಸಗಿದ ಆರೋಪಿಯನ್ನು ಹಾಗೂ ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ಮುಂಬೈ ನಿವಾಸಿಯಾಗಿರುವ ಬಿಹಾರದ ಅಬ್ದುಲ್ ಹಲೀಂ (37) ಹಾಗೂ ಕುಲಶೇಖರ ನಿವಾಸಿ ಶಮೀನಾ ಬಾನು (22) ಬಂಧಿತ ಆರೋಪಿಗಳು.

Ad Widget . Ad Widget .

ನಗರಕ್ಕೆ ಬಂದಿದ್ದ ಅಬ್ದುಲ್ ಹಲೀಂ ಗೆಳೆಯನ ಜೊತೆ ಆ.10 ರಂದು ಬೈಕಿನಲ್ಲಿ ಕಾಸರಗೋಡಿಗೆ ಹೋಗಿ ಮರಳುತ್ತಿದ್ದಾಗ ಮಂಜೇಶ್ವರ ಹಾಗೂ ಹೊಸಂಗಡಿ ಮಧ್ಯೆ ಬೈಕ್ ಅಪಘಾತವಾಗಿತ್ತು. ಅವರಿಬ್ಬರೂ ಗಾಯಗೊಂಡಿದ್ದರು. ನಗರದ ಆಸ್ಪತ್ರೆಯೊಂದರಲ್ಲಿ ಒಂದೇ ರೂಮಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಭಿನ್ನ ಸಾಮರ್ಥ್ಯದ ಬಾಲಕಿಯೊಬ್ಬಳನ್ನು ಆಕೆಯ ಪೋಷಕರು ಆಸ್ಪತ್ರೆಯಲ್ಲಿ ಶಮೀನಾ ಬಾನು ಜತೆ ಬಿಟ್ಟು ಹೋಗಿದ್ದರು. ಆರೋಪಿಯು ಶಮಿನಾ ಬಾನು ಸಹಾಯ ಪಡೆದು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಬಗ್ಗೆ ಆಕೆಯ ತಾಯಿ ಮಹಿಳಾ ಠಾಣೆಗೆ ದೂರು ನೀಡಿದ್ದರು. ಆರೋಪಿ ವಿರುದ್ಧ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೊಕ್ಸೊ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅತ್ಯಾಚಾರಕ್ಕೆ ಸಹಕರಿಸಿದ ಆರೋಪಿ ಶಮೀನಾ ಬಾನುವನ್ನು ಆ.16ರಂದೇ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಪ್ರಕರಣದ ಆರೋಪಿ ಅಬ್ದುಲ್ ಹಲೀಂ ಆ.16ರಂದು ಮುಂಬಯಿಗೆ ಹೋಗುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಹಿಳಾ ಠಾಣಾ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಗೋವಾದ ಮಡಂಗಾವ್ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಅವರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸೆಕ್ಸ್ ಮಾಡಿದ್ದನ್ನು ನೋಡಿದ್ದಳು:
ಶಮೀನಾ ಬಾನು ಆರೋಪಿ ಅಬ್ದುಲ್ ಹಲೀಂ ಜೊತೆ ಸೆಕ್ಸ್ ಮಾಡುತ್ತಿದ್ದ ಸಮಯ ವಿಶೇಷ ಭಿನ್ನ ಸಾಮರ್ಥ್ಯದ ಅಪ್ರಾಪ್ತ ಹುಡುಗಿ ನೋಡಿದ್ದಾಳೆ. ಇದನ್ನು ಗಮನಿಸಿದ ಶಮೀನಾ ಬಾನು ವಿಶೇಷ ಭಿನ್ನ ಸಾಮಾರ್ಥ್ಯದ ಅಪ್ರಾಪ್ತ ಹುಡುಗಿಯನ್ನು ಕರೆದು ಬೆಡ್ ಮೇಲೆ ಕುಳ್ಳಿರಿಸಿದ್ದಾಳೆ.

ಆಗ ಆರೋಪಿ ಹಲೀಂ ಬಾಲಕಿಯ ಮೇಲೂ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದು, ಆಕೆ ಪ್ರತಿರೋಧ ಒಡ್ಡಿದಾಗ ಶಮೀನಾ ಬಾನುನ ಸಹಕಾರದಿಂದ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಲಾಗಿದೆ.

Leave a Comment

Your email address will not be published. Required fields are marked *