ಉಪ್ಪಿನಂಗಡಿ: ಡ್ರಗ್ಸ್ ಸಾಗಾಟದಲ್ಲಿ ಇಬ್ಬರು ಅರೆಸ್ಟ್

ಸಮಗ್ರ ನ್ಯೂಸ್: ಮಾದಕ ವಸ್ತುವಾದ ಎಂಡಿಎಂಎ ಅನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಉಪ್ಪಿನಂಗಡಿ ಪೊಲೀಸರು ಅವರಿಂದ 6 ಸಾವಿರ ಮೌಲ್ಯದ 3.2 ಮಿಲಿ ಗ್ರಾಂ ಮಾದಕ ವಸ್ತುವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತರನ್ನು ಬಜತ್ತೂರು ಗ್ರಾಮದ ಲತೀಫ್ ಬಿ.ಎ. (35) ಹಾಗೂ ಕೊಕ್ಕಡ ಗ್ರಾಮದ ಬಿ.ಜುನೈದ್‌ (30) ಎಂದು ಗುರುತಿಸಲಾಗಿದೆ.

Ad Widget ... ..

ಇವರಿಬ್ಬರು ಇಲ್ಲಿನ ಕೂಟೇಲು ಬಳಿ ಆ. 15ರಂದು ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭ ಸ್ಕಾರ್ಪಿಯೋ ವಾಹನವೊಂದನ್ನು ಪೊಲೀಸರು ನಿಲ್ಲಿಸಲು ಸೂಚಿಸಿದ್ದು, ಈ ವೇಳೆ ವಾಹನವನ್ನು ನಿಲ್ಲಿಸಿ ಅದರಲ್ಲಿದ್ದ ಇಬ್ಬರು ಪರಾರಿಯಾಗಲು ಯತ್ನಿಸಿದ್ದರು. ಅವರನ್ನು ಹಿಡಿದು ವಿಚಾರಿಸಿದಾಗ ಅವರಲ್ಲಿ ಮಾದಕ ವಸ್ತುವಾದ ಎಂಡಿಎಂಎ ಪತ್ತೆಯಾಗಿದೆ. ಇವರಿಂದ ಕೃತ್ಯಕ್ಕೆ ಬಳಸಿದ ವಾಹನ, ಎರಡು ಮೊಬೈಲ್‌ಗ‌ಳನ್ನು ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ad Widget

Leave a Comment

Your email address will not be published. Required fields are marked *