Ad Widget .

ಸೌಜನ್ಯ ಪ್ರಕರಣದಲ್ಲಿ ತಿಮರೋಡಿ ಸುಳ್ಳು ಆಪಾದನೆ ಮಾಡ್ತಿದಾರಾ? ಮೌನ ಮುರಿದ ಖ್ಯಾತ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ!!

ಸಮಗ್ರ ನ್ಯೂಸ್: ಅತ್ಯಾಚಾರಕ್ಕೆ ಒಳಗಾಗಿ ಕೊಲೆಗೀಡಾದ ಧರ್ಮಸ್ಥಳದ ಪಾಂಗಾಳ ನಿವಾಸಿ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ಸುಳ್ಳು ಆಪಾದನೆ ಮಾಡ್ತಿದಾರೆ ಎಂದು ಕೆಲವರು ಸೋಶಿಯಲ್ ಮೀಡಿಯಾಗಳಲ್ಲಿ ಹೇಳುತ್ತಿದ್ದು, ಈ ಕುರಿತಂತೆ ಪ್ರಸಿದ್ದ ವಾಗ್ಮಿ ದ.ಕನ್ನಡದ ಪುತ್ತೂರಿನ ಪುತ್ತಿಲ ಪರಿವಾರದ ಶ್ರೀಕೃಷ್ಣ ಉಪಾಧ್ಯಾಯ ಮೌನ ಮುರಿದಿದ್ದಾರೆ.

Ad Widget . Ad Widget .

ಕಳೆದ ಸೋಮವಾರ (ಆ. 14) ರಂದು ಪುತ್ತೂರಿನಲ್ಲಿ ನಡೆದ ಪ್ರತಿಭಟನಾ ಸಭೆ ವೇಳೆ ಧರ್ಮಸ್ಥಳದ ಆನೆ ಮಾವುತರಾಗಿದ್ದ ನಾರಾಯಣ ಎಂಬವರ ಮಗ ಉಪಾಧ್ಯಾಯರ ಜೊತೆ ಮಾತನಾಡಿದ ವಿಡಿಯೋ ವೈರಲ್ ಆಗ್ತಾ ಇದೆ. ಈ ಹಿನ್ನೆಲೆಯಲ್ಲಿ ತಮ್ಮ ಪೇಸ್ ಬುಕ್ ನಲ್ಲಿ ಶ್ರೀಕೃಷ್ಣ ಉಪಾಧ್ಯಾಯರು ಈ ರೀತಿ ಬರೆದುಕೊಂಡಿದ್ದಾರೆ.

Ad Widget . Ad Widget .

“ಹಿಂದಿನಿಂದ ವೀಡಿಯೋ ರೆಕಾರ್ಡ್ ಆಗ್ತಾ ಇತ್ತು ಅಂತ ನಂಗೆ ಗೊತ್ತಾಗಿರ್ಲಿಲ್ಲ. ಧರ್ಮಸ್ಥಳದಲ್ಲಿ ಹೋಟೆಲ್ ಅಯೋಧ್ಯಾ ಅಂತೇನೋ ತಲೆಯೆತ್ತಿ ನಿಲ್ಲುವ ಮುನ್ನ ಆ ಜಾಗ ಒಬ್ಬ ಮಾವುತರದ್ದಾಗಿತ್ತು ಅಂತ ಹೇಳೋದನ್ನು ಕೇಳಿರ್ಬಹುದು ನೀವೆಲ್ಲ. ಅದೇ ಮಾವುತನ ಕೊಲೆಯಾಯಿತಂತಲ್ಲ, ಆ ಮಾವುತನ ಮಗನೇ ನನ್ನ ಹತ್ತಿರ ಮಾತಾಡ್ತಿರೋ ವೀಡಿಯೋ ಇದು! ಇಂತಹ ಅಸಂಖ್ಯ ಅಮಾನವೀಯ ಘಟನೆಗಳನ್ನು ನಾನು ಬೆಳ್ತಂಗಡಿ ಭಾಗದ ಹುಡುಗರು ಹೇಳೋದನ್ನು ಕೇಳಿದ್ದೇನೆ. ಹಾಗಾಗಿ ನಾನು ಫೇಸ್‌ಬುಕ್‌ ನಲ್ಲಿ ವಾದ ಮಾಡ್ತಿರೋದಕ್ಕೆ ಕಾರಣ.

ತಿಮರೋಡಿ ಸುಳ್ಳು ಹೇಳ್ತಾರೆ, ಹೆಸರು ಮಾಡೋಕೆ ನೋಡ್ತಾರೆ ಇನ್ನು ಏನು ಬೇಕಿದ್ರೂ ಹೇಳಿ. ಆದರೆ ಈ ವ್ಯಕ್ತಿ ತಿಮರೋಡಿ ಅಲ್ವಲ್ಲ? ಇಂತಹ ಅದೆಷ್ಟೋ ಜನ ನನ್ನ ಹತ್ರ ಫೋನಲ್ಲೂ ಮಾತನಾಡಿದ್ದಾರೆ, ಭೇಟಿ ಆಗಿಯೂ ಮಾತನಾಡಿದ್ದಾರೆ! ಭಗವಂತ!, ದಯಮಾಡಿ ಬೆಳ್ತಂಗಡಿಯ ಜನ ಶಾಂತಿ ನೆಮ್ಮದಿಯಲ್ಲಿ ಬದುಕುವಂತೆ ಮಾಡು”
ಶ್ರೀ ಕ್ರಷ್ಣ ಉಪದ್ಯಾಯ…

ಈ ರೀತಿಯಾಗಿ ಶ್ರೀಕೃಷ್ಣ ಉಪಾಧ್ಯಾಯರು ತಮ್ಮ ವಾಲ್ ನಲ್ಲಿ ಬರೆದುಕೊಂಡಿದ್ದು, ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವ ಪಡೆದುಕೊಂಡಿದೆ.

Leave a Comment

Your email address will not be published. Required fields are marked *