Ad Widget .

ಈ ಜಿಲ್ಲೆಯಲ್ಲಿ ವರನಿಲ್ಲ, ವಧುನೂ ಇಲ್ಲ. ಆದ್ರೆ ಮದುವೆ ನಡೆಯುತ್ತೆ !| ಆ ಜಿಲ್ಲೆ ಯಾವುದು.!?

ಸಮಗ್ರ ನ್ಯೂಸ್: ಇಲ್ಲಿ ಭಾರೀ ಗೌಜಿಯ ಮದುವೆ. ಶಾಸ್ತ್ರಕ್ಕೆ ಕುಂದಿಲ್ಲ, ಸಂಪ್ರದಾಯದಲ್ಲಿ ಲೋಪವಿಲ್ಲ ಹೀಗೆ ಆಗುತ್ತೆ ನೋಡಿ ನವಜೋಡಿಗಳ ಕಲ್ಯಾಣ ಸಮಾರಂಭ. ಹಾಗಂತ ಹಸಮಣೆ ಏರಿದ ನವದಂಪತಿ ಮಾತ್ರ ಯಾರ ಕಣ್ಣಿಗೆ ಕಾಣಿಸೋದು ಇಲ್ಲ. ಅಬ್ಬ! ಇದೆಂತಹಾ ಆನ್ಲೈನ್ ಮದ್ವೆನಾ ಅಂತಾ ಕೇಳ್ಬೇಡಿ. ಬದಲಿಗೆ ಇದು ತುಳುನಾಡಿನಲ್ಲಿ ಇಂದಿಗೂ ಆಚರಣೆಯಲ್ಲಿರೋ ಒಂದು ವಿಶಿಷ್ಟ ಸಂಪ್ರದಾಯ!

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಪ್ರೇತಾತ್ಮ ಮದುವೆ!
ನಿಜ, ಮದ್ವೆ ಅಂದ್ಮೇಲೆ ಅಲ್ಲಿ ಗಂಡು, ಹೆಣ್ಣಿನ ಉಪಸ್ಥಿತಿ ರ‍್ಲೇಬೇಕು. ಆದ್ರಿಲ್ಲಿ ನಡೆಯೋ ಮದ್ವೆಯಲ್ಲಿ ಗಂಡು, ಹೆಣ್ಣಿನ ಕುಟುಂಬಿಕರಷ್ಟೇ ಹಾಜರಿರುತ್ತಾರೆ. ಹಾಗಿದ್ರೆ ವಧು, ವರನಿಲ್ಲದ ಈ ಮದ್ವೆ ಎಂತದ್ದು ಅಂತೀರ? ಯೆಸ್, ಇದುವೇ ತುಳುವರ ಪ್ರೇತಾತ್ಮ ಮದ್ವೆ ಆಚರಣೆ.

Ad Widget . Ad Widget . Ad Widget .

ಸತ್ತವರ ಮದುವೆ
ತುಳು ಮಾಸ ಆಟಿ ಅಂದ್ರೆ ಯಾವುದೇ ಶುಭಕರ‍್ಯಗಳು ಕರಾವಳಿ ಭಾಗದಲ್ಲಿ ನಡೆಯೋದಿಲ್ಲ.ಆದ್ರೆ ಈ ಸಮಯದಲ್ಲಿ ಕುಟುಂಬದಲ್ಲಿ ಯಾರಾದ್ರೂ ಮದುವೆಯಾಗದೇ ಅಕಾಲಿಕವಾಗಿ ಮೃತಪಟ್ಟಿದ್ದರೆ ಅಂತವರ ಮದುವೆ ಮಾಡೋ ಸಂಪ್ರದಾಯ ಇದೆ. ಇಲ್ಲೂ ನಡೆದಿರೋದು ಅಂತಹದೇ ಒಂದು ಮದುವೆಯ ಸಂಪ್ರದಾಯ.

ಮೃತಪಟ್ಟಿರುವ ವರ, ವಧು!
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಗ್ಗ ಎಂಬಲ್ಲಿಯ ವಧುವಿನ ಕುಟುಂಬ ಹಾಗೂ ಉಳ್ಳಾಲ ತಾಲೂಕಿನ ಕೊಣಾಜೆ ಸಮೀಪದ ಬೊಳ್ಮ ಎಂಬಲ್ಲಿಯ ವರನ ಕುಟುಂಬದ ನಡುವೆ ಮದುವೆ ಸಂಬಂಧ ರ‍್ಪಟ್ಟಿತು.ಬಂಟ್ವಾಳ ವಗ್ಗದ ಮಾಂಗಜೆಯ ಸಂಜೀವ ಪೂಜಾರಿಯವರ ಮಗಳು ವಿಶಾಲಾಕ್ಷಿ ೨ ರ‍್ಷದ ಮಗುವಾಗಿದ್ದಾಗ ಅಂದ್ರೆ ಸರಿ ಸುಮಾರು ೩೫ ರ‍್ಷಗಳ ಹಿಂದೆ ಮೃತಪಟ್ಟಿದ್ದಾರು. ಇನ್ನು ಉಳ್ಳಾಲದ ಕೊಣಾಜೆ ಸಮೀಪದ ಬೊಳ್ಮ ಗ್ರಾಮದ ಲಕ್ಷ್ಮಣ ಪೂಜಾರಿಯವರ ಪುತ್ರ ಧರಣೇಶ್ ಕಳೆದ ಎರಡು ವರ್ಷಗಳ ಹಿಂದೆ ಮೃತ ಪಟ್ಟಿದ್ದರು.

ವರಾನ್ವೇಷಣೆ ನಡೆಸಿದ ಕುಟುಂಬ
ಹೃದಯದ ತೊಂದರೆ ಇದ್ದ ಕಾರಣ ಧರಣೇಶ್ ಅವರಿಗೆ ಮದುವೆ ಮಾಡುವ ಬಗ್ಗೆ ಮನೆಯವರು ಯೋಚನೆ ಮಾಡಿರಲಿಲ್ಲ. ವಧುವಿನ ಕಡೆಯವರಿಗೆ ಜ್ಯೋತಿಷ್ಯದಲ್ಲಿ ಕಂಡು ಬಂದಂತೆ ವಿಶಾಲಕ್ಷಿಗೆ ಮದುವೆ ಮಾಡಬೇಕಾಗಿತ್ತು. ಈ ವೇಳೆ ವರಾನ್ವೇಷಣೆ ನಡೆಸಿದಾಗ ಧರಣೇಶನ ಸಂಬಂಧ ಸಿಕ್ಕಿ ಎಲ್ಲಾ ಮಾತುಕತೆ ನಡೆಸಿ ಸಂಪ್ರದಾಯದಂತೆ ಮದುವೆ ಕರ‍್ಯ ಮಾಡಲಾಗಿದೆ.

ಮದ್ವೆ ಮಾಡ್ದಿದ್ರೆ ಏನಾಗುತ್ತೆ!?
ತುಳುನಾಡಿನಲ್ಲಿ ಆಟಿ ಮಾಸದಲ್ಲಿ ನಡೆಯೋ ಈ ಪ್ರೇತಗಳ ಮದುವೆ ವಿಚಿತ್ರ ಅನಿಸಿದ್ರೂ, ಬಹಳಷ್ಟು ರ‍್ಷದಿಂದ ಇದು ನಡೆದುಕೊಂಡು ಬಂದಿದೆ. ಮೃತರ ಆತ್ಮಕ್ಕೆ ಸದ್ಗತಿ ಸಿಕ್ಕಿಲ್ಲದೆ ಇದ್ರೆ ಕುಟುಂಬದ ಸದಸ್ಯರಿಗೆ ಒಂದಲ್ಲಾ ಒಂದು ಸಮಸ್ಯೆ ಕಾಡುತ್ತೆ. ಮದುವೆಯಾಗಲು ಹೊರಟ ಯುವಕ ಯುವತಿಯರಿಗೂ ನಾನಾ ತೊಂದರೆ ಎದುರಾಗುತ್ತದೆ.

ಶಾಸ್ತ್ರೋಕ್ತ ಮದುವೆ!
ಈ ರೀತಿ ಕುಟುಂಬದಲ್ಲಿ ಕಾಣಿಸುವ ಸಮಸ್ಯೆಗಳಿಗೆ ಜ್ಯೋತಿಷ್ಯದಲ್ಲಿ ಕಂಡು ಬರುವ ಪರಿಹಾರವಾಗಿ ಈ ರೀತಿಯ ಮದುವೆಗಳು ನಡೆಯುತ್ತದೆ. ಈ ಪ್ರೇತಾತ್ಮಗಳ ಮದುವೆ ತುಳು ಸಂಪ್ರದಾಯದ ಕಟ್ಟುಪಾಡುಗಳಂತೆ ನಡೆಯೋದೆ ಒಂದು ವಿಶೇಷ.

Leave a Comment

Your email address will not be published. Required fields are marked *