ದೇವರಮನೆ ಗುಡ್ಡದಲ್ಲಿ ಪ್ರವಾಸಿಗರಿಂದ ಅಸಭ್ಯ ವರ್ತನೆ| ಕುಡಿದು ಕುಣಿದ ಪುಂಡರು

ಸಮಗ್ರ ನ್ಯೂಸ್: ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಪ್ರವಾಸಿತಾಣ ದೇವರಮನೆಗುಡ್ಡದಲ್ಲಿ ಕೆಲ ಪ್ರವಾಸಿಗಳು ಕುಡಿದು ಬಂದು ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Ad Widget ... ..

ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಈ ರೀತಿ ಕಂಡುಬರುತ್ತಿತ್ತು ಆದರೆ ಈಗ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುವ ಸುಪ್ರಸಿದ್ಧ
ಐತಿಹಾಸಿಕ ಕಾಲಭೈರವೇಶ್ವರ ಸ್ವಾಮಿ ದೇಗುಲದ ಬಳಿಯೇ ಮದ್ಯ ಸೇವಿಸಿ ಕಾರಿನಲ್ಲಿ ಸಾಂಗ್ ಹಾಕಿಕೊಂಡು ಕೆಲ ಯುವಕರು ಕುಣಿದು ಕುಪ್ಪಳಿಸುವುದು ಇತರೇ ಪ್ರವಾಸಿಗರಿಗೆ ತೊಂದರೆಯನ್ನುಂಟು ಮಾಡಿದೆ.

Ad Widget

ಕಣ್ಣಿನ ದೃಷ್ಟಿ ಮುಗಿದರೂ, ಮುಗಿಯದ ಹಚ್ಚ ಹಸಿರ ಮುತ್ತೈದೆ ಸೊಬಗು ಅಲ್ಲಿನದು. ಮಕ್ಕಳ ಸಮೇತ ಫ್ಯಾಮಿಲಿಗಳು ಭೇಟಿ ನೀಡುವ ಸುಂದರ ಸೊಬಗಿನ ತಾಣದಲ್ಲಿ ಇಂತಹ ಚಟುಟಿಕೆಗಳು ನಡೆಯಬಾರದು, ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳಿಯರು ಹಾಗೂ ಪ್ರವಾಸಿಗರು ಮನವಿಮಾಡಿದ್ದಾರೆ.

Leave a Comment

Your email address will not be published. Required fields are marked *