ಮಂಗಳೂರು: ಪುತ್ರ ಶೋಕದಿಂದ ಒಂದೇ ತಿಂಗಳಿಗೆ ಆತ್ಮಹತ್ಯೆ ಮಾಡಿಕೊಂಡ ಅಪ್ಪ

ಸಮಗ್ರ ನ್ಯೂಸ್: ಪುತ್ರನ ಸಾವಿನ ಬಳಿಕ ಒಂದು ತಿಂಗಳ ಅಂತರದಲ್ಲೇ ತಂದೆಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ.

Ad Widget ... ..

ಮೃತದೇಹವು ಉಳ್ಳಾಲ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ. ಇವರು ಕೇರಳ ಕುಂಬಳೆ ಬಳಿಯ ಬಂಬ್ರಾಣ ಕಲ್ಕುಲ ನಿವಾಸಿ ಲೋಕೇಶ್ ಎಂದು ಗುರುತಿಸಲಾಗಿದೆ. ಇವರು ಕೂಲಿ ಕೆಲಸ ಮಾಡಿಕೊಂಡು ಇದ್ದರೆಂದು ತಿಳಿದುಬಂದಿದೆ.

Ad Widget

ಇವರ ಪುತ್ರ ರಾಜೇಶ್ ಕಳೆದ ಜು.10 ರಂದು ನಾಪತ್ತೆಯಾಗಿ, ಬಳಿಕ ಆತನ ಮೃತದೇಹ ಜು.12 ರಂದು ಬೆಳಗ್ಗೆ ಮಂಗಳೂರು ಬೆಂಗರೆ ನೇತ್ರಾವತಿ ನದಿ ತೀರದಲ್ಲಿ ಪತ್ತೆಯಾಗಿತ್ತು. ಲೋಕೇಶ್ ಅವರು ಮಗನ ಸಾವಿನ ಬಳಿಕ ಮಾನಸಿಕವಾಗಿ ಕುಗ್ಗಿ ಹೋಗಿದ್ದರು, ಆ ನೋವಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

Leave a Comment

Your email address will not be published. Required fields are marked *