Ad Widget .

ಬರ್ತಾ ಇದೆ ಬಿಗ್ ಬಾಸ್ – ಸೀಸನ್-10| ಈ ಬಾರಿ ಒಟಿಟಿಗೆ ಕೋಕ್

ಸಮಗ್ರ ನ್ಯೂಸ್: ಎಲ್ಲರ ನೆಚ್ಚಿನ ಬಿಗ್ ಬಾಸ್ ಈಗ ವಾಪಸ್ಸಾಗ್ತಿದೆ. ಕಳೆದ ಸಲ ಮೊಟ್ಟಮೊದಲ ಬಾರಿಗೆ ಒಟಿಟಿಯಲ್ಲಿ ಬಂದ ಬಿಗ್ ಬಾಸ್ ಬೇರೆಯೇ ಹಂತಕ್ಕೆ ತಲುಪಿತ್ತು. ಅದೇ ಫಾರ್ಮುಲಾ ಈ ಬಾರಿನೂ ಮುಂದುವರೆಯುತ್ತೆ ಎನ್ನಲಾಗಿತ್ತು. ಆದರೆ, ಈ ಬಾರಿ ಬಿಗ್ ಬಾಸ್ ಓಟಿಟಿಗೆ ಕೋಕ್ ಕೊಡಲಾಗಿದೆ. ಮೊದಲು ಒಟಿಟಿ ಆ ನಂತರ ಟಿವಿಗೆ ಅನ್ನೋ ಕಾನ್ಸೆಪ್ಟ್ ಅನ್ನು ಕೈ ಬಿಟ್ಟಿದೆ ಕಲರ್ಸ್ ಕನ್ನಡ.

Ad Widget . Ad Widget .

ಈಗಾಗ್ಲೇ ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ದಿನಾಂಕ, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಮುಂತಾದವುಗಳ ಬಗ್ಗೆ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ಕಲರ್ಸ್ ಕನ್ನಡ ತಂಡ ಹತ್ತನೇ ಸೀಸನ್ ಬಿಗ್ ಬಾಸ್ ಗೆ ಭರ್ಜರಿ ತಯಾರಿ ಮಾಡಿಕೊಂಡಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.

Ad Widget . Ad Widget .

ಸದ್ಯ ಕಲರ್ಸ್ ಕನ್ನಡ ತಂಡ ‘ಅನುಬಂಧ ಅವಾರ್ಡ್ಸ್’ ಕಾರ್ಯಕ್ರಮದ ತಯಾರಿಯಲ್ಲಿ ಬ್ಯುಸಿಯಾಗಿದೆ. ಇದರ ಜೊತೆ ಜೊತೆಗೆ ಬಿಗ್ ಬಾಸ್ ಸೀಸನ್ 10ಕ್ಕೆ ತೆರೆಮರೆಯಲ್ಲಿ ತಯಾರಿ ಕೂಡ ನಡೆಯುತ್ತಿದೆ. ಸೆಪ್ಟೆಂಬರ್ ಮೊದಲನೇ ವಾರದಲ್ಲಿ ಈ ಅವಾರ್ಡ್ಸ್ ಕಾರ್ಯಕ್ರಮ ನಡೆಯಲಿದ್ದು ಇದು ಮುಗಿದ ನಂತರ ಕೊನೆಯ ವಾರದ ವೇಳೆಗೆ ಬಿಗ್ ಬಾಸ್ ಆರಂಭ ಆಗಬಹುದು ಎಂದು ಮೂಲಗಳು ಹೇಳುತ್ತಿವೆ.

ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮ ಎಲ್ಲಿ ನಡೆಯುತ್ತೆ? ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳು ಎನ್ನುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟಕ್ಕೆ ಚರ್ಚೆ ನಡೆಯುತ್ತಿದೆ. ಅಂದ್ಹಾಗೆ ಈ ಬಾರಿ ಕಿರುತೆರೆ ನಟಿ ನಮ್ರತಾ ಗೌಡ, ‘ಹುಚ್ಚ’ ಸಿನಿಮಾ ನಾಯಕಿ ರೇಖಾ, ನಟಿ ಆಶಾ ಭಟ್, ಸೋಶಿಯಲ್ ಮೀಡಿಯಾ ಸ್ಟಾರ್ ಭೂಮಿಕಾ ಬಸವರಾಜ್ ಬಿಗ್ ಬಾಸ್ ಮನೆಯಲ್ಲಿ ಇರುತ್ತಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

Leave a Comment

Your email address will not be published. Required fields are marked *