Ad Widget .

ಮಂಗಳೂರು: ಪೊಲೀಸ್ ಗೆ ”ನಿನ್ನನ್ನು ಸಸ್ಪೆಂಡ್ ಮಾಡಿಸ್ತೇನೆ” ಎಂದು ಅವಾಜ್ ಹಾಕಿದ ಕಾಂಗ್ರೆಸ್ ಮುಖಂಡ ಅಂದರ್

ಸಮಗ್ರ ನ್ಯೂಸ್: ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ್ದಲ್ಲದೇ ಠಾಣಾಧಿಕಾರಿಯನ್ನೇ ವರ್ಗಾವಣೆ ಮಾಡುವ ಬೆದರಿಕೆ ಹಾಕಿದ ಮಂಗಳೂರಿನ ಕಾಂಗ್ರೆಸ್ ಮುಖಂಡನನ್ನು ಉರ್ವಾ ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ನಗರದ ಉರ್ವಾ ಠಾಣೆಯ ಇನ್ಸ್ ಪೆಕ್ಟರ್ ಗೆ ಸಸ್ಟೆಂಡ್ ಮಾಡಿಸ್ತೇನೆ ಅಂತ ಕೈ ಮುಖಂಡ ಪುನೀತ್ ಶೆಟ್ಟಿ ಎಂಬಾತ ಬೆದರಿಕೆ ಹಾಕಿದ್ದಲ್ಲದೇ, ನ್ಯಾಯಾಧೀಶರನ್ನು ಠಾಣೆಗೆ ಕರೆಸಬೇಕಾ?ಎಂದು ಬೆದರಿಕೆ ಹಾಕಿದ್ದ. ಯುವ ಕಾಂಗ್ರೆಸ್ ಹಾಗೂ ಇಂಟಕ್ ನ ಮುಖಂಡನಾಗಿರುವ ಪುನೀತ್ ಶೆಟ್ಟಿ ಉರ್ವಾ ಪೊಲೀಸ್ ಠಾಣೆ ಎಎಸ್ಸೈ ವೇಣುಗೋಪಾಲ್ ಗೆ ಬೆದರಿಕೆ ಹಾಕಿದ್ದ.

Ad Widget . Ad Widget .

ಹೀಗಾಗಿ ಎಎಸ್ಸೈ ದೂರಿನ ಹಿನ್ನೆಲೆ ಆರೋಪಿ ಕಾಂಗ್ರೆಸ್ ಮುಖಂಡ ಪುನೀತ್ ಶೆಟ್ಟಿ ಬಂಧನವಾಗಿದೆ. ಪರವಾನಿಗೆ ಹೊಂದಿದ ಪಿಸ್ತೂಲ್ ಸಹಿತ 6 ಸಜೀವ ಗುಂಡುಗಳು ವಶವಾಗಿದ್ದು, ಕೃತ್ಯಕ್ಕೆ ಬಳಸಿದ ಸೆಲ್ ಫೋನ್ ಹಾಗೂ ಕಾರು ಸ್ವಾದೀನ ಪಡಿಸಿಕೊಳ್ಳಲಾಗಿದೆ. ಹಲವು ಪೊಲೀಸ್ ಠಾಣೆಗಳಲ್ಲಿ ಆರೋಪಿ ಆಗಿರುವ ಪುನೀತ್ ಶೆಟ್ಟಿ ವಿರುದ್ದ ರೌಡಿ ಶೀಟ್ ಕೂಡ ಇದೆ‌.

ಅಪಘಾತ ಪ್ರಕರಣ ಸಂಬಂಧ ತನಗೆ ಸಂಬಂಧಿಸಿ ಕಾರು ಚಾಲಕನ ಪರವಾಗಿ ಪುನೀತ್ ಶೆಟ್ಟಿ ವಕಾಲತ್ತು ವಹಿಸಿದ್ದಾನೆ. ಹೀಗಾಗಿ ಉರ್ವಾ ಠಾಣೆಯ ಎಎಸ್ಸೈ ವೇಣುಗೋಪಾಲ್ ಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ತುಳುವಿನಲ್ಲಿ ಮಾತನಾಡಿದ ಪುನೀತ್ ಶೆಟ್ಟಿ, ನಾನು ಪುನೀತ್ ಶೆಟ್ಟಿ ಮಾತನಾಡುವುದು ನಿಮಗೆ ಕಾರನ್ನು ಯಾಕೆ ತಂದು ಹಾಜರು ಮಾಡಬೇಕು? ಎಂದು ಪ್ರಶ್ನೆ ಮಾಡಿದ್ದಲ್ಲದೇ ಎಫ್‌ಐಆರ್ ಯಾಕೆ ದಾಖಲಿಸಿಲ್ಲ ಅಂತ ಪ್ರಶ್ನಿಸಿದ್ದಾನೆ. ಈ ವೇಳೆ ಎಎಸ್ಸೈ ಕೋರ್ಟ್ ಅನುಮತಿ ಪಡೆದು ಎಫ್‌ಐಆರ್ ದಾಖಲಿಸ್ತೀವಿ ಅಂದಾಗ, ಏನು ನ್ಯಾಯಾಧೀಶರನ್ನು ಠಾಣೆಗೆ ಕರೆಸಬೇಕಾ ಉರ್ವಾ ಠಾಣೆಗೆ? ಎಂದು ಉಡಾಫೆಯಾಗಿ ಪ್ರಶ್ನಿಸಿದ್ದಾನೆ.

Leave a Comment

Your email address will not be published. Required fields are marked *