ಚಿಕ್ಕಮಗಳೂರು : ಅರಣ್ಯ ಅಧಿಕಾರಿಗಳ ಕಿತ್ತಾಟದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಸಮಗ್ರ ನ್ಯೂಸ್: ಅರಣ್ಯ ವಸತಿ ಗೃಹದಲ್ಲಿ ಶೌಚಾಲಯದ ನಲ್ಲಿಪೈಪ್ ಹೊಡೆದು ಹೋಗಿದ್ದಕ್ಕೆ ಅಧಿಕಾರಿಗಳಿಬ್ಬರ ನಡುವೆ ಅವಾಚ್ಯ ಶಬ್ದಗಳಿಂದ ಪರಸ್ಪರ ಕಿತ್ತಾಟ ನಡೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಆ.15 ರಂದು ನಡೆದಿದೆ.

Ad Widget ... ..

ಮೂಡಿಗೆರೆ ತಾಲೂಕಿನ ವಲಯ ಅರಣ್ಯಾಧಿಕಾರಿ ಮೋಹನ್ ಹಾಗೂ ಉಪವಲಯ ಅರಣ್ಯಾಧಿಕಾರಿ ನವೀನ್ ಮಧ್ಯೆ ಪರಸ್ಪರ ಅವಾಚ್ಯ ಶಬ್ದಗಳಿಂದ ಸಂಭಾಷಣೆ ನಡೆದಿದ್ದು, ಅದರ ಆಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

Ad Widget

ಕುಡಿದು ಮಾತಾಡಬೇಡ ಎಂದ ನವೀನ್ ಗೆ ಮೋಹನ್ ಅವಾಚ್ಯ ಶಬ್ದಗಳಿಂದ ಬೈದಿದ್ದು, ಸಣ್ಣ ವಿಚಾರ ವೀಕೋಪಕ್ಕೆ ತಿರುಗಿ ಪರಸ್ಪರ ಮಾತುಕತೆ ನಡೆದಿದೆ, ಸಣ್ಣ ಮಕ್ಕಳ ರೀತಿ ಕಿತ್ತಾಡಿಕೊಂಡಿರೋ ಇಬ್ಬರು ಅರಣ್ಯಾಧಿಕಾರಿಗಳ ವಿರುದ್ಧ ಸ್ಥಳೀಯರಿಂದ ಕೂಡ ಆಕ್ರೋಶ ವ್ಯಕ್ತವಾಗಿದೆ.

Leave a Comment

Your email address will not be published. Required fields are marked *