Ad Widget .

ಸುಳ್ಯ:ಗಾಂಧಿನಗರ ಮದರಸದಲ್ಲಿ ಸ್ವಾತoತ್ರ್ಯ ಸಂಭ್ರಮ| ಸಹೋದರತೆ, ಸಮಾನತೆಯ ಸಂವಿಧಾನದ ಆಶಯದಡಿಯಲ್ಲಿ ದೇಶ ಇಂದಿಗೂ ಸುಭದ್ರ:ಕೆ.ಎಂ.ಮುಸ್ತಫ

ಸಮಗ್ರ ನ್ಯೂಸ್:ಗಾಂಧಿನಗರ ಜುಮ್ಮಾ ಮಸ್ಜಿದ್, ಮುನವ್ವಿರುಲ್ ಇಸ್ಲಾಂ ಮದರಸ ಆಶ್ರಯದಲ್ಲಿ 77ನೇ ಸ್ವಾತಂತ್ರ ದಿನಾಚರಣೆ ಮದರಸ ವಠಾರದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.

Ad Widget . Ad Widget .

ಜುಮ್ಮಾ ಮಸ್ಜಿದ್ ಅಧ್ಯಕ್ಷ ಕೆ. ಎಂ. ಮುಸ್ತಫ ಧ್ವಜಾರೋಹಣ ಮಾಡಿ ಮಾತನಾಡಿದರು. ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ ಮಾತನಾಡಿ ಇಸ್ಲಾಂ ಧರ್ಮಗಳ ತಿರುಳನ್ನು ಪರಸ್ಪರ ಅರಿತರೆ ಸೌಹಾರ್ದತೆಗೆ ಭದ್ರ ಬುನಾದಿ ಎಂದರು.

Ad Widget . Ad Widget .

ಈ ಸಂಧರ್ಭದಲ್ಲಿ ಮದರಸದ ಸದರ್ ಉಸ್ತಾದ್ ಇಬ್ರಾಹಿಂ ಸಖಾಫಿ ಪುಂಡೂರ್, ಜಮಾಅತ್ ಆಡಳಿತ ಸಮಿತಿ ಉಪಾಧ್ಯಕ್ಷ ಹಾಜಿ ಮಹಮ್ಮದ್ ಕೆಎಂಎಸ್ ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ, ಖಜಾಂಚಿ ಹಾಜಿ ಮಹಿಯುದ್ದೀನ್ ಫ್ಯಾನ್ಸಿ, ನಿರ್ದೇಶಕರುಗಳಾದ ಕೆ. ಬಿ. ಅಬ್ದುಲ್ ಮಜೀದ್,ಎಸ್. ಎಂ. ಅಬ್ದುಲ್ ಹಮೀದ್, ಅಬ್ದುಲ್ ಹಮೀದ್ ಬೀಜಕೊಚ್ಚಿ, ಜಿ. ಎಂ. ಇಬ್ರಾಹಿಂ, ಜಿ. ಎ. ಅಬ್ದುಲ್ ಖಾದರ್ ಹಾಜಿ ಆಜಾದ್,ಅನ್ಸಾರ್ ಕಾರ್ಯದರ್ಶಿ ಸಂಶುದ್ದೀನ್ ಕೆ. ಬಿ. ಸಹಾಯಕ ಸದರ್ ಅಬ್ದುಲ್ ಖಾದರ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು
ಮುದರ್ರಿಸ್ ಇರ್ಫಾನ್ ಸಖಾಫಿ ದುಃವಾ ಪ್ರಾರ್ಥನೆ ನೆರವೇರಿಸಿದರು. ಅಬ್ದುಲ್ ಲತೀಫ್ ಸಖಾಫಿ ಸ್ವಾಗತಿಸಿದರು.

Leave a Comment

Your email address will not be published. Required fields are marked *