ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ| ಇಂದು ಬೆಳ್ತಂಗಡಿ ತಾಲೂಕಿನ ಹಲವೆಡೆ ಸ್ಟಿಕ್ಕರ್ ಅಭಿಯಾನ

ಸಮಗ್ರ ನ್ಯೂಸ್: ಧರ್ಮಸ್ಥಳದ ನೇತ್ರಾವತಿ ತೀರದ ಮಣ್ಣಸಂಕ ಬಳಿ ಅತ್ಯಾಚಾರಿಗಳಿಂದ ಅಮಾನುಷವಾಗಿ ಕೊಲೆಯಾದ ಪಾಂಗಾಳದ ಸೌಜನ್ಯಳ ಸಾವಿಗೆ ನ್ಯಾಯ ದೊರಕಿಸುವ ಸಲುವಾಗಿ‌ ಇಂದು(ಆ15) ಬೆಳ್ತಂಗಡಿ ತಾಲೂಕಿನ ಹಲವಡೆ ‘justice for soujanya’ ಸ್ಟಿಕ್ಕರ್ ಅಭಿಯಾನ ನಡೆಯಿತು.

Ad Widget ... ..

ತಾಲೂಕಿನ ಕಕ್ಕಿಂಜೆ, ಸೋಮಂತಡ್ಕ, ನೆರಿಯ ಸೇರಿದಂತೆ ಹಲವು ಗ್ರಾಮಗಳಲ್ಲಿ ಜನ ತಮ್ಮ ವಾಹನಗಳಿಗೆ ಸ್ಟಿಕ್ಕರ್ ಅಂಟಿಸಿ ಸೌಜನ್ಯ ಪರ ಬೆಂಬಲ ಸೂಚಿಸಿದ್ದಾರೆ.

Ad Widget

ಈ ನಡುವೆ ಧರ್ಮಸ್ಥಳದ ಧರ್ಮಾಧಿಕಾರಿ ಹೇಳಿದ್ದಾರೆ ಎನ್ನಲಾದ ವಾಟ್ಸಪ್ ಸಂದೇಶವೊಂದು ಹರಿದಾಡುತ್ತಿದ್ದು, ಇದು ಸುಳ್ಳು ಸಂದೇಶ ಎಂದು ತಿಳಿದುಬಂದಿದೆ. ಸಂದೇಶವನ್ನು ಫಾರ್ವರ್ಡ್‌ ಮಾಡದಂತೆ ಹೋರಾಟಗಾರರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *