Ad Widget .

ಸುಳ್ಯ: ಗುತ್ತಿಗಾರಿನ ವಳಲಂಬೆಯಲ್ಲಿ ಕೊಳವೆ ಬಾವಿ ಮುಚ್ಚಿ ಹಾಕಿರುವ ಪ್ರಕರಣ| ಸಾರ್ವಜನಿಕರಿಂದ ಪಂಚಾಯತ್ ಗೆ ದೂರು; ಕೈಪಂಪ್ ಮರುಸ್ಥಾಪಿಸಲು ಆಗ್ರಹ

ಸಮಗ್ರನ್ಯೂಸ್: ಪಂಚಾಯತ್ ನಿಂದ ನಿರ್ಮಿಸಲಾಗಿದ್ದ ಕೊಳವೆ ಬಾವಿ ಮುಚ್ಚಿ ಹಾಕಿರುವ ಪ್ರಕರಣಕ್ಕೆ ತಿರುವು ಪಡೆದುಕೊಂಡಿದ್ದು ಇದೀಗ ಸಾರ್ವಜನಿಕರು ಗ್ರಾಮ ಪಂಚಾಯತ್ ಸದಸ್ಯರ ವಿರುದ್ಧ ದೂರು ನೀಡಿರುವ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರಿನಿಂದ ವರದಿಯಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಪ್ರಕರಣದ ವಿವರ: ಜಾಲ್ಸೂರು – ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಸಿಗುವ ವಳಲಂಬೆ ಎಂಬ ಪ್ರದೇಶದಲ್ಲಿ ಕೆಲದಿನಗಳ ಹಿಂದೆ ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯ ವೆಂಕಟ್ ವಳಲಂಬೆ ಎಂಬವರು ತನ್ನ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಲು ತಯಾರಿ ನಡೆಸುತ್ತಿದ್ದರು. ಇದೇ ಸಮಯಕ್ಕೆ ಆ ಜಾಗದ ಪಕ್ಕದಲ್ಲಿದ್ದ ಪಂಚಾಯತ್ ಹ್ಯಾಂಡ್ ಬೋರ್ ವೆಲ್ ಕಾಣೆಯಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರಗೊಂಡಿತ್ತು.

Ad Widget . Ad Widget . Ad Widget .

ಇದೀಗ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು, ವಳಲಂಬೆ ಶಂಖಪಾಲ ಸುಬ್ರಮಣ್ಯ ದೇವಸ್ಥಾನದ ಎದುರು ರಸ್ತೆಯ ಬದಿಯಲ್ಲಿ ಹಲವು ವರ್ಷಗಳಿಂದ ಪಂಚಾಯತ್ ವತಿಯಿಂದ ನಿರ್ಮಿಸಲಾದ ಕೊಳವೆ ಬಾವಿಗೆ ಕೈ ಪಂಪ್ ಅಳವಡಿಸಲಾಗಿತ್ತು. ಈ ಕೈ ಪಂಪ್ ಗ್ರಾಮಸ್ಥರಿಗೆ, ದೇವಳಕ್ಕೆ ಬರುವ ಭಕ್ತಾದಿಗಳಿಗೆ ಉಪಯೋಗಕ್ಕೆ ಲಭ್ಯವಾಗುತ್ತಿತ್ತು, ಕಳೆದ ಬೇಸಿಗೆಯಲ್ಲೂ ಈ ಕೈ ಪಂಪ್ ನಿಂದಲೇ ಹಲವಾರು ಮಂದಿ ಸಾರ್ವಜನಿಕರು ನೀರನ್ನು ಕುಡಿಯಲು ಬಳಸುತ್ತಿದ್ದರು, ಆದರೆ ಕಳೆದ ಜುಲೈ 11 ರ ರಾತ್ರಿ ಪಂಚಾಯತ್ ಸದಸ್ಯರಾದ ವೆಂಕಟರಮಣ ವಳಲಂಬೆ ಇವರು ಕೊಳವೆ ಬಾವಿಯ ಬಳಿ ನಿರ್ಮಿಸಲಾಗುತ್ತಿರುವ ತಮ್ಮ ಸ್ವಂತ ಕಾಂಪ್ಲೆಕ್‌ ಕಟ್ಟಡದ ಅನುಕೂಲಕ್ಕಾಗಿ ಕೊಳವೆ ಬಾವಿಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿದ್ದು ಸಾರ್ವಜನಿಕರ ಸ್ವತ್ತನ್ನು ಹಾಳುಗೆಡವಿರುವುದು ಬೆಳಕಿಗೆ ಬಂದಿದೆ.

ಆದ್ದರಿಂದ ಈ ಕೊಳವೆ ಬಾವಿಯನ್ನು ಈ ಹಿಂದನಂತೆ ಅಲ್ಲಿಯೇ ನಿರ್ಮಿಸಿ ಸಾರ್ವಜನಿಕರಿಗೆ ಉಪಯೋಗಿಸಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಗ್ರಾಮ ಪಂಚಾಯತ್ ಗೆ ದೂರು ದಾಖಲಿಸಿದ್ದಾರೆ.

ಧಮ್ಕಿ ಆಡಿಯೋ ವೈರಲ್:
ಪಂಚಾಯತ್ ಹ್ಯಾಂಡ್ ಬೋರ್ ವೆಲ್ ಕಾಣೆಯಾದ ಬಗ್ಗೆ ವೆಬ್ ಮಾಧ್ಯಮವೊಂದು “ಗುತ್ತಿಗಾರಿನಲ್ಲಿ ಬೋರ್ ವೆಲ್ ಕಾಣೆ” ಎಂಬ ಶೀರ್ಷಿಕೆಯಲ್ಲಿ ವರದಿ ಮಾಡಿತ್ತು. ಈ ವರದಿಯನ್ನು ನೋಡಿದ ಗ್ರಾಮಸ್ಥನೋರ್ವ ಗುತ್ತಿಗಾರು ಗ್ರಾಮ ಪಂಚಾಯತ್ ನ ವಾಟ್ಸಪ್ ಗ್ರೂಪ್ ಗೆ ಹಾಕಿದ್ದು, ಈ ಕುರಿತು ಹಲವು ಚರ್ಚೆಗಳು ನಡೆದಿದೆ. ಈ ವೇಳೆ ಗ್ರಾಮ ಪಂಚಾಯತ್ ಸದಸ್ಯನಾದ ವೆಂಕಟ್ ವಳಲಂಬೆ ಪಂಚಾಯತ್ ನ ವಾಟ್ಸಪ್ ಗ್ರೂಪ್ ಗೆ ಹಾಕಿದ ವ್ಯಕ್ತಿಗೆ ಕರೆ ಮಾಡಿ ನ್ಯೂಸ್ ಶೇರ್ ಮಾಡಿದಕ್ಕೆ ಧಮ್ಕಿ ಹಾಕಿದ್ದು, ಈ ಬಗ್ಗೆ ಆಡಿಯೋ ಒಂದು ಪಂಚಾಯತ್ ಗ್ರೂಪ್ ನಲ್ಲಿ ಹರಿದಾಡುತ್ತಿತ್ತು.

Leave a Comment

Your email address will not be published. Required fields are marked *