Ad Widget .

ವೈಟ್ ಬೋರ್ಡ್ ವಾಹನ ಇರುವವರ ಬಿಪಿಎಲ್ ಕಾರ್ಡ್ ರದ್ದತಿಗೆ ಮುಂದಾದ ಆಹಾರ ಇಲಾಖೆ| RTOದಿಂದ ಮಾಹಿತಿ ಪಡೆದುಕೊಂಡು ಸರ್ವೆಗೆ ನಿರ್ಧಾರ

ಸಮಗ್ರ ನ್ಯೂಸ್: ವೈಟ್ ಬೋರ್ಡ್ ಕಾರು ಇರುವವರಿಗೆ ಪಡಿತರ ಚೀಟಿಯ ರದ್ದು ಪ್ರಕ್ರಿಯೆ ಸರ್ಕಾರ ಶುರು ಮಾಡಿದೆ. ಆಹಾರ ಇಲಾಖೆಯಿಂದ ನಾಲ್ಕು ಚಕ್ರ ವಾಹನಗಳ ಸರ್ವೆ ನಡೆಯುತ್ತಿದೆ.

Ad Widget . Ad Widget .

ಅನ್ನಭಾಗ್ಯ ಯೋಜನೆ ಜಾರಿಯಾಗಿ 5 ಕೆ.ಜಿ ಉಚಿತ ಅಕ್ಕಿ ವಿತರಣೆ ಮತ್ತು 5 ಕೆ.ಜಿಗೆ ಅಕ್ಕಿಗೆ 170 ರೂಪಾಯಿ ಹಣ ಪಡಿತರ ಚೀಟಿದಾರರಿಗೆ ತಲುಪಿದೆ. ಈ ಮಧ್ಯೆ ವೈಟ್‍ಬೋರ್ಡ್ ಕಾರು ಇರುವ ಕಾರ್ಡ್‌ಗಳನ್ನು ರದ್ದು ಮಾಡಲು ಮುಂದಾಗಿದೆ. ಈ ಪದ್ಧತಿ ಮೊದಲಿನಿಂದ ಇದೆ ಎಂದು ಹೇಳಲಾಗ್ತಿದ್ದು, ಈ ವರ್ಷ ವೈಟ್ ಬೋರ್ಡ್ ಕಾರು ಹೊಂದಿರುವ ನಾಲ್ಕು ಚಕ್ರದ ವಾಹನ ಸರ್ವೆಗೆ ಆಹಾರ ಇಲಾಖೆ ಮುಂದಾಗಿದೆ.

Ad Widget . Ad Widget .

ಈ ಬಗ್ಗೆ ಸರ್ವೆ ನಡೆಸಲು ಮುಂದಾಗಿದ್ದು, ಮುಂದಿನ ತಿಂಗಳ ಒಳಗಡೆ ಪ್ರಕ್ರಿಯೆ ಶುರು ಮಾಡಲಿದ್ದಾರಂತೆ. RTOದಿಂದ ನಾಲ್ಕು ಚಕ್ರ ವಾಹನ ಹೊಂದಿರುವವರ ಮಾಹಿತಿ ಬರಲಿದೆ. ಜೊತೆಗೆ ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿ ಪಡೆದು ಸರಕಾರ ಆದಾಯ ತೆರಿಗೆ ಪಾವತಿ ಮಾಡ್ತಾ ಇರುವವರ ಕಾರ್ಡ್ ರದ್ದು ಮಾಡುವ ಪ್ರಕ್ರಿಯೆ ಆರಂಭ ಮಾಡಲಿದೆ.

ಅನ್ನಭಾಗ್ಯ ಹಣ ಎಲ್ಲಾ ಜಿಲ್ಲೆಯ ಪಡಿತರ ಚೀಟಿದಾರರಿಗೆ ತಲುಪಿದ್ದು, ಅದರಲ್ಲಿ 10 ಲಕ್ಷಕ್ಕೂ ಹೆಚ್ಚು ಪಡಿತರದಾರರಿಗೆ ತಲುಪಿಲ್ಲ ಅಂತಾ ಹೇಳಲಾಗ್ತಿದೆ. ಕಾರಣ ಅಕೌಂಟ್ ನಂಬರ್ ಸರಿ ಇಲ್ಲದೇ ಇರುವಂತಹದ್ದು, ಆಧಾರ್ ಗೆ ಅಕೌಂಟ್ ಲಿಂಕ್ ಆಗಿಲ್ಲ ಎನ್ನುವಂತಹದ್ದು, ಈ ರೀತಿಯ ಕಾರಣದಿಂದ ಅಮೌಂಟ್ ತಲುಪಿಲ್ಲ.

ವೈಟ್ ಬೋರ್ಡ್ ಕಾರು ಇರುವವರ ಪಡಿತರ ಚೀಟಿ ರದ್ದಾಗಲಿದ್ದು, ಆಹಾರ ಇಲಾಖೆ ಮಾಹಿತಿ ಸಂಗ್ರಹಕ್ಕೆ ಸರ್ವೆ ಮಾಡಲು ಮುಂದಾಗಿದೆ. ಈಗಾಗಿ ಈ ವರ್ಷ ವೈಟ್‍ಬೋರ್ಡ್ ಕಾರು ಸಂಬಂಧ ಎಷ್ಟು ಕಾರ್ಡ್ ರದ್ದಾಗಲಿದೆ ಕಾದು ನೋಡಬೇಕಿದೆ.

Leave a Comment

Your email address will not be published. Required fields are marked *