Ad Widget .

ಪ್ರೇಮಿಯನ್ನು ಕೂಡಲು ಪತಿಯನ್ನೇ ಕೊಂದ ಪತ್ನಿ| ನಿದ್ದೆ ಮಾತ್ರೆ ನೀಡಿ ಚಿರನಿದ್ರೆಗೆ ಕಳುಹಿಸಿದ ಅರ್ಧಾಂಗಿ!!

ಸಮಗ್ರ ನ್ಯೂಸ್: ಪ್ರಿಯತಮನ ಜೊತೆ ಸೇರಲು‌ ತಾಳಿ ಕಟ್ಟಿದ ಪತಿಗೇ ಪತ್ನಿ ಹಳ್ಳ ತೋಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹನುಮನ ಹಳ್ಳಿಯಲ್ಲಿ ನಡೆದಿದೆ. ಆರೋಪಿಯನ್ನು ಇಲ್ಲಿನ ನಿವಾಸಿ ಪಾವನ ಎಂದು ಗುರುತಿಸಲಾಗಿದ್ದು, ನವೀನ್(28) ಮೃತ ದುರ್ದೈವಿ.

Ad Widget . Ad Widget .

ಆರೋಪಿ ಪಾವನ ತನ್ನ ಪ್ರೇಮಿ ಸಂಜಯ್ ನ ಜೊತೆಗಿರಲು ನವೀನ್ ಅಡ್ಡಿಯಾಗಿದ್ದ. ಇದಕ್ಕಾಗಿ ಈಕೆ ಗಂಡನಿಗೆ ಗತಿ ಕಾಣಿಸಲು ತೀರ್ಮಾನಿಸಿದ್ದು, ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಜ್ಞಾನ ತಪ್ಪಿಸಿದ್ದಾಳೆ. ಬಳಿಕ ಪ್ರಜ್ಞೆ ತಪ್ಪಿದ ಪತಿಯನ್ನು ಪ್ರೇಮಿ ಜೊತೆ ಬೈಕಲ್ಲಿ ತಂದು ಕೆರೆಗೆ ಎಸೆದಿದ್ದಾಳೆ.

Ad Widget . Ad Widget .

ಆಗಸ್ಟ್ 6ರಂದು ಯಗಟಿ ಕೆರೆ ಬಳಿ ನವೀನ್ ಮೃತದೇಹ ಪತ್ತೆಯಾಗಿತ್ತು. ಈ ವೇಳೆ ಆತನ ಪೋಷಕರು ಸಹಜ ಸಾವಲ್ಲ, ಕೊಲೆ ಎಂದು ದೂರು ನೀಡಿದ್ದರು.

ತನಿಖೆ ಕೈಗೊಂಡ ಪೊಲೀಸರಿಗೆ ಪತ್ನಿಯೇ ಕೊಲೆಗಾತಿ ಅನ್ನೋದು ಖಾತ್ರಿಯಾಗಿತ್ತು. ಪ್ರೇಮಿ ಸಂಜಯ್ ಜೊತೆ ಸೇರಿ ಪತಿ ನವೀನ್ ಗೆ ಮಂಗಳ ಹಾಡಿದ್ದ ಪತ್ನಿ ಪಾವನ ಇದೀಗ ಕಂಬಿ ಎಣಿಸುತ್ತಿದ್ದಾಳೆ. ತನಿಖೆಯಲ್ಲಿ ಎಲ್ಲಾ ಸತ್ಯವನ್ನು ಪಾವನ-ಸಂಜಯ್ ಬಾಯ್ಬಿಟ್ಟಿದ್ದು, ನವೀನ್ (28) ಪತ್ನಿಯ ಕಣ್ಣಾಮುಚ್ಚಾಲೆ ಆಟಕ್ಕೆ ಬಲಿಯಾಗಿದ್ದಾನೆ.

Leave a Comment

Your email address will not be published. Required fields are marked *