Ad Widget .

ರಾಷ್ಟ್ರಧ್ವಜ ಸಾರ್ವಭೌಮತ್ವದ ಸಂಕೇತ:ಡಾ|| ಚೂಂತಾರು

ಸಮಗ್ರ ನ್ಯೂಸ್: 76ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದಿನಾಂಕ 14-08-2023ನೇ ಸೋಮವಾರದಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿಯಲ್ಲಿ ಸಾಂಕೇತಿಕವಾಗಿ ‘ಹರ್ ಘರ್ ತಿರಂಗ’ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 76 ವರ್ಷದ ಅಂಗವಾಗಿ ಗೃಹರಕ್ಷಕ ದಳದ ಕಛೇರಿಯಲ್ಲಿ ‘ಹರ್ ಘರ್ ತಿರಂಗ’ ಎಂಬ ಅಭಿಯಾನವನ್ನು ಗೃಹರಕ್ಷಕದಳ ಮತ್ತು ಪೌರರಕ್ಷಣಾ ಪಡೆಯ ವತಿಯಿಂದ ಚಾಲನೆ ನೀಡಲಾಯಿತು.

Ad Widget . Ad Widget .

ರಾಷ್ಟ್ರ ಧ್ವಜವನ್ನು ಮನೆ ಮನೆಗಳಲ್ಲಿ ಹಾರಿಸಬೇಕು, ಅರಳಿಸಬೇಕು, ಗೌರವಿಸಬೇಕು, ರಾಷ್ಟ್ರಧ್ವಜ ಎನ್ನುವುದು ಸಾರ್ವಭೌಮತ್ವದ ಸಂಕೇತವಾಗಿರುತ್ತದೆ, ಜನರಲ್ಲಿ ರಾಷ್ಟ್ರಧ್ವಜದ ಬಗ್ಗೆ ಅರಿವು, ಜಾಗೃತಿ ಮೂಡಿಸಿ ರಾಷ್ಟ್ರದ ಬಗ್ಗೆ ಅಭಿಮಾನ ಮತ್ತು ಗೌರವ ಮೂಡಿಸಬೇಕು ಎಂದು ನುಡಿದರು. ರಾಷ್ಟ್ರ ಧ್ವಜಕ್ಕೆ ಎಲ್ಲಾ ರೀತಿಯ ಗೌರವ ನೀಡಿ ಧ್ವಜ ಸಂಹಿತೆಯ ಮಾರ್ಗದರ್ಶನದಂತೆ ನಡೆಯತಕ್ಕದ್ದು.ಪ್ರತಿ ಗೃಹರಕ್ಷಕರು ತಮ್ಮ ಮನೆಗಳಲ್ಲಿ ರಾಷ್ಟ್ರ ಧ್ವಜ ಅರಳಿಸಿ, ದೇಶ ಪ್ರೇಮ ಮೆರೆಯಬೇಕು ಎಂದು ಗೃಹರಕ್ಷಕರಿಗೆ ಆದೇಶ ನೀಡಿದರು.

Ad Widget . Ad Widget .

ಈ ಕಾರ್ಯಕ್ರಮದಲ್ಲಿ ಮಂಗಳೂರು ಘಟಕದ ಹಿರಿಯ ಗೃಹರಕ್ಷಕರಾದ ಧನಂಜಯ್, ಸುನೀಲ್, ನವೀನ್, ಸಂಶುದ್ದೀನ್, ಸಂದೇಶ್ ಕುಮಾರ್, ನಿಖಿಲ್, ರಾಘವೇಂದ್ರ, ರೋಹಿದಾಸ್, ಸುಲೋಚನ, ಜಯಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು

Leave a Comment

Your email address will not be published. Required fields are marked *