Ad Widget .

ಗೌರವಾನ್ವಿತ ದೇಶವಾಸಿಗಳೇ, ಧ್ವಜಾರೋಹಣ ವೇಳೆ ಈ ತಪ್ಪು ಮಾಡದಿರಿ…

ಸಮಗ್ರ ನ್ಯೂಸ್: ಆಗಸ್ಟ್ 15 ರ ನಾಳೆ ದೇಶಾದ್ಯಂತ ಸ್ವಾತಂತ್ಯ್ಯ ದಿನಾಚರಣೆ ಸಂಭ್ರಮ, ಧ್ವಜವನ್ನು ಹಾರಿಸುವ ಸಂದರ್ಭದಲ್ಲಿ ಕಟ್ಟುನಿಟ್ಟಾಗಿ ಅನುಸರಿಸಬೇಕಾದ ಕೆಲವು ನಿಯಮಗಳಿವೆ. ಇಲ್ಲದಿದ್ದರೆ, ಅದು ತ್ರಿವರ್ಣ ಧ್ವಜಕ್ಕೆ ಮಾಡಿದ ಅವಮಾನ. ಧ್ವಜಾರೋಹಣದ ನಿಯಮಗಳ ಅನುಸರಣೆ ಕಡ್ದಾಯವಾಗಿದೆ.

Ad Widget . Ad Widget .

ನಿಯಮಗಳನ್ನು ಉಲ್ಲಂಘಿಸುವವರಿಗೆ ಶಿಕ್ಷೆಯಾಗುವುದಲ್ಲದೆ ದಂಡವನ್ನೂ ಪಾವತಿಸಬೇಕಾಗುತ್ತದೆ. ಕನಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಇರುತ್ತದೆ ಎಂದು ನಿಯಮಗಳು ಹೇಳುತ್ತವೆ. ಅವಮಾನ ತಡೆ ಕಾಯ್ದೆ, 1971 ಮತ್ತು ಭಾರತದ ಧ್ವಜ ಸಂಹಿತೆ, 2022.

Ad Widget . Ad Widget .

ನಿಯಮಗಳು:
ಧ್ವಜದ ಉದ್ದವು 3:2 ರ ಅನುಪಾತದಲ್ಲಿರಬೇಕು.
ಕೈಮಗ್ಗ ಖಾದಿಯನ್ನು ಹತ್ತಿ ಬಟ್ಟೆಯಿಂದ ತಯಾರಿಸಬೇಕು.

ಧ್ವಜವನ್ನು ತೆಗೆದುಕೊಳ್ಳುವ ಮೊದಲು ಅದನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು.
ಧ್ವಜದ ಮಧ್ಯದಲ್ಲಿ ಧರ್ಮ ಚಕ್ರದಲ್ಲಿ 24 ಗೆರೆಗಳು ಇರಬೇಕು.

ರಾಷ್ಟ್ರಧ್ವಜವನ್ನು ಗೌರವದಿಂದ ಕಾಣಬೇಕು.
ಹಾರುವಾಗ ಧ್ವಜವು ಕೋಲಿನ ಬಲಭಾಗದಲ್ಲಿರಬೇಕು.
ಧ್ವಜಾರೋಹಣದ ಸಮಯದಲ್ಲಿ ಧ್ವಜವನ್ನು ಹರಿದು ಹಾಕಬಾರದು.

ಧ್ವಜದ ಮೇಲೆ ಯಾವುದೇ ಬರಹಗಳು ಇರಬಾರದು. ಯಾವ ಬಣ್ಣವು ಮೇಲಿರಬೇಕು ಮತ್ತು ಯಾವ ಬಣ್ಣವು ಕೆಳಗೆ ಇರಬೇಕು ಎಂಬುದನ್ನು ನೀವು ಮುಂಚಿತವಾಗಿ ತಿಳಿದುಕೊಳ್ಳಬೇಕು.

ಮೂರು ಬಣ್ಣಗಳು ಸಮಾನವಾಗಿರಬೇಕು.
ಕೇಸರಿ ಬಣ್ಣ ಮೇಲ್ಬಾಗದಲ್ಲಿದ್ದರೆ, ಹಸಿರು ಬಣ್ಣವು ಕೆಳಭಾಗದಲ್ಲಿರಬೇಕು. ಯಾವುದೇ ಸಂದರ್ಭದಲ್ಲೂ ಅದನ್ನು ಮೇಲೆಕೆಳಗೆ ಮಾಡಬಾರದು.

ಧ್ವಜವನ್ನು ಅಲಂಕಾರಕ್ಕಾಗಿ ಬಳಸಬಾರದು.
ಯಾವುದೇ ಸಂದರ್ಭದಲ್ಲೂ ಅದನ್ನು ನೆಲದ ಮೇಲೆ ಎಸೆಯಬಾರದು. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು.

Leave a Comment

Your email address will not be published. Required fields are marked *