Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಗ್ರಹಗತಿಗಳ ಸ್ಥಾನದ ಆಧಾರದ ಮೇಲೆ ವಾರ ಭವಿಷ್ಯ ನೀಡಲಾಗಿದ್ದು ಈ ವಾರ 8 ರಾಶಿಗಳಿಗೆ ಅನುಕೂಲಕರವಾದರೆ 4 ರಾಶಿಯವರಿಗೆ ಮಿಶ್ರಫಲ. ನಿಮ್ಮ ರಾಶಿಗೆ ಈ ವಾರ ಹೇಗಿದೆ ನೋಡೋಣ:

Ad Widget . Ad Widget .

ಮೇಷ:
ಕೆಲಸ ಕಾರ್ಯಗಳ ನಡುವೆ ವಿಶ್ರಾಂತಿಯನ್ನು ತೆಗೆದುಕೊಳ್ಳಲು ಮರೆಯದಿರಿ. ನಿಮಗೆ ಇಷ್ಟವೆನಿಸುವ ವಸ್ತುಗಳನ್ನು ಕೊಳ್ಳಲು ಹೆಚ್ಚಿನ ಹಣದ ಅವಶ್ಯಕತೆ ಕಂಡು ಬರುತ್ತದೆ. ಅತಿಯಾದ ಕೆಲಸದ ಕಾರಣ ಒತ್ತಡವನ್ನು ಸಹಿಸಿಕೊಳ್ಳುವ ಗುಣವನ್ನು ಬೆಳೆಸಿಕೊಳ್ಳಬೇಕು. ಉದ್ಯೋಗದಲ್ಲಿ ಎದುರಾಗುವ ಸಮಸ್ಯೆಗಳು ಕ್ಷಣಮಾತ್ರದಲ್ಲಿ ಮರೆಯಾಗಲಿವೆ. ವಿದ್ಯಾರ್ಥಿಗಳು ವಿಶೇಷವಾದಂತಹ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳುತ್ತಾರೆ. ಸ್ವಂತ ವ್ಯಾಪಾರ ವ್ಯವಹಾರಗಳು ನಿರೀಕ್ಷಿತ ಲಾಭವನ್ನು ನೀಡುತ್ತವೆ. ಪ್ರಯತ್ನಪಟ್ಟಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹೊರದೇಶಕ್ಕೆ ತೆರಳುವ ಅವಕಾಶವನ್ನು ಪಡೆಯಬಹುದು. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆಯಿಂದ ಇರಿ.

Ad Widget . Ad Widget .

ವೃಷಭ:
ಬಹುದಿನದಿಂದ ಕಾಡುತ್ತಿದ್ದ ಆರೋಗ್ಯದಲ್ಲಿನ ಸಮಸ್ಯೆಯು ಸುಲಭವಾಗಿ ಪರಿಹಾರವಾಗುತ್ತದೆ. ಹಣಕಾಸಿನ ವಿಚಾರಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವ ಪ್ರಯತ್ನ ಮಾಡುವಿರಿ. ಕೈ ಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳಿಂದ ಅನಿರೀಕ್ಷಿತ ಸವಲತ್ತುಗಳು ಲಭಿಸುತ್ತದೆ. ಸಹೋದ್ಯೋಗಿಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುವಿರಿ. ಮೊದಲ ಆದ್ಯತೆಯನ್ನು ಸ್ವಂತ ಕೆಲಸಗಳಿಗೆ ನೀಡುವಿರಿ. ವಿದ್ಯಾರ್ಥಿಗಳು ಶಿಕ್ಷಕರು ಮತ್ತು ಪೋಷಕರಿಂದ ಉತ್ತಮ ಸಹಕಾರ ಮತ್ತು ಪ್ರಶಂಸೆಯನ್ನು ಗಳಿಸುತ್ತಾರೆ. ವಿವಾಹ ಯೋಗವಿದೆ. ಸಾಲದ ವ್ಯವಹಾರವನ್ನು ಮಾಡದಿರಿ.

ಮಿಥುನ:
ಅತಿ ಕಷ್ಟಕರ ಕೆಲಸ ಕಾರ್ಯಗಳನ್ನು ಸಹ ಹೆಚ್ಚಿನ ಆತ್ಮವಿಶ್ವಾಸದಿಂದ ಮಾಡುವಿರಿ. ಯಶಸ್ಸನ್ನು ಗಳಿಸುವುದೇ ಹವ್ಯಾಸವಾಗುತ್ತದೆ. ಹಣಕಾಸಿನ ಕೊರತೆಯಾಗಲಿ ತೊಂದರೆಯಾಗಲಿ ಎದುರಾಗದು. ಗೌರವಕ್ಕೆ ಚ್ಯುತಿ ತರುವ ಯಾವುದೇ ಕೆಲಸವನ್ನು ಆರಂಭಿಸುವುದಿಲ್ಲ. ಎಲ್ಲರೊಂದಿಗೆ ಮನ ಬಿಚ್ಚಿ ಮಾತಾಡಿದರೆ ಯಾವುದೇ ಸಮಸ್ಯೆ ಎದುರಾಗದು. ಪಾಲುಗಾರಿಕೆಯ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯವು ದೊರೆಯುತ್ತದೆ. ಹಳೆಯ ಸಂತೋಷದ ಕ್ಷಣಗಳನ್ನು ಕುಟುಂಬದ ಎಲ್ಲರೊಂದಿಗೆ ಹಂಚಿಕೊಳ್ಳುವಿರಿ. ಎಲ್ಲರಿಗೂ ಸಹಾಯ ವಾಗುವಂತಹ ಕೆಲಸವೊಂದನ್ನು ಆರಂಭಿಸುವಿರಿ. ರಾಜಕೀಯ ಪ್ರವೇಶಿಸುವ ಇಚ್ಛೆ ಇದ್ದಲ್ಲಿ ಸೂಕ್ತ ವೇದಿಕೆ ಉಂಟಾಗುತ್ತದೆ.

ಕಟಕ:
ವಯಸ್ಸಿನ ಅರಿವಿಲ್ಲದೆ ಹೊಸ ವಿಚಾರಗಳನ್ನು ಕಲಿಯಲು ಆಸಕ್ತಿ ತೋರುವಿರಿ. ಬೇರೆಯವರಿಂದ ಸಂದಾಯವಾಗಬೇಕಿದ್ದ ಹಣವು ಮರಳಿ ಬರುತ್ತದೆ. ಎಷ್ಟೇ ಬುದ್ಧಿವಂತರಾದರು ಅನುಭವಿಗಳ ಸಹಾಯವನ್ನು ಪಡೆಯುವುದು ಒಳ್ಳೆಯದು. ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ಮತ್ತು ಏಕಾಗ್ರತೆ ರೂಡಿಸಿಕೊಂಡಲ್ಲಿ ವಿನೂತನ ಸಾಧನೆ ಮಾಡಬಹುದು. ಉದ್ಯೋಗದಲ್ಲಿ ವಿಶಿಷ್ಟ ಸ್ಥಾನಮಾನ ಲಭಿಸುವ ಸಾಧ್ಯತೆ ಇದೆ. ದುಡುಕುತನದಲ್ಲಿ ದೊರೆಯಬಹುದಾದ ಅವಕಾಶಗಳನ್ನು ಕಳೆದುಕೊಳ್ಳದಿರಿ. ಚಿಕ್ಕ ವಿಚಾರವಾದರೂ ಗಂಭೀರತೆಯಿಂದ ಚಿಂತಿಸುವುದು ಒಳ್ಳೆಯದು. ಕುಟುಂಬದವರ ಸಹಕಾರ ಜೀವನದಲ್ಲಿ ಹೊಸ ಆಶಯವನ್ನು ಉಂಟುಮಾಡುತ್ತದೆ.

ಸಿಂಹ:
ಪ್ರತಿಯೊಂದು ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತವೆ. ಅನಿರೀಕ್ಷಿತ ಖರ್ಚು ವೆಚ್ಚಗಳು ಉಂಟಾದರೂ ಯಾವುದೇ ತೊಂದರೆ ಎದುರಾಗದು. ಆರೋಗ್ಯದಲ್ಲಿ ಸ್ವಲ್ಪ ಏರಿಳಿತ ಉಂಟಾಗುತ್ತದೆ. ವಯೋವೃದ್ಧರಿಗೆ ಸ್ನಾಯುಗಳ ಎಳೆತದ ತೊಂದರೆ ಉಂಟಾಗಲಿದೆ. ಕುಟುಂಬದ ಸದಸ್ಯರ ಜೊತೆಗೂಡಿ ಸಂತೋಷಕೂಟವನ್ನು ಏರ್ಪಾಟು ಮಾಡುವಿರಿ. ಸೋಲನ್ನು ಎದುರಿಸಲಾಗದೆ ನಿರಾಸೆಯಲ್ಲಿ ಮುಳುಗುವಿರಿ. ಕೌಟುಂಬಿಕ ಜೀವನದಲ್ಲಿ ವಿಶೇಷವಾದಂತಹ ಧಿಡೀರ್ ಬದಲಾವಣೆ ಕಂಡುಬರುತ್ತದೆ. ಕುಟುಂಬದಲ್ಲಿ ಎದುರಾಗುವ ದೊಡ್ಡ ಸಮಸ್ಯೆಯೊಂದು ಹಿರಿಯರ ಬುದ್ಧಿವಂತಿಕೆಯಿಂದ ಮರೆಯಾಗುತ್ತದೆ. ವಿದ್ಯಾರ್ಥಿಗಳು ವಿಶೇಷ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳುವ ಸಾಧ್ಯತೆಗಳಿವೆ.

ಕನ್ಯಾ:
ಮನೆಯಲ್ಲಿ ಅಥವಾ ಮನೆಯ ಹೊರಗೆ ಕೈಕಾಲುಗಳಿಗೆ ಪೆಟ್ಟು ಬೀಳುವ ಸಾಧ್ಯತೆಗಳಿವೆ, ಎಚ್ಚರಿಕೆ ಇರಲಿ. ಹಿರಿಯ ಸೋದರ ಅಥವಾ ಸೋದರಿಯ ಸಹಾಯ ಸಹಕಾರ ಸದಾಕಾಲ ಲಭಿಸುತ್ತದೆ. ಅತಿ ಮುಖ್ಯವಾದ ಕೆಲಸವು ನಿಧಾನಗತಿಯಲ್ಲಿ ಸಾಗುತ್ತದೆ. ಉದ್ಯೋಗದಲ್ಲಿ ಅನೀಕ್ಷಿತ ಬೆಳವಣಿಗೆಗಳು ಸಂತಸಕ್ಕೆ ಕಾರಣವಾಗುತ್ತವೆ. ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮದಿಂದ ಮಾತ್ರ ಉತ್ತಮ ಫಲಿತಾಂಶವನ್ನು ಗಳಿಸಲು ಸಾಧ್ಯವಾಗುತ್ತದೆ. ಸ್ವಂತ ವ್ಯಾಪಾರ ವ್ಯವಹಾರಗಳು ಹೆಚ್ಚಿನ ಲಾಭಗಳಿಸುತ್ತದೆ. ವಾಹನಗಳ ಮಾರಾಟದಿಂದ ವಿಶೇಷ ಲಾಭವನ್ನು ಗಳಿಸುವಿರಿ. ಬಂಧು ಬಳಗದವರಿಂದ ದೂರ ಇರಬೇಕಾದ ಪ್ರಸಂಗ ಎದುರಾಗುತ್ತದೆ.

ತುಲಾ:
ಶಾಂತಿ ಸಹನೆಯಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುವಿರಿ. ಉದ್ಯೋಗದಲ್ಲಿ ತೋರುವ ಕಾರ್ಯದಕ್ಷತೆಗೆ ತಕ್ಕಂತಹ ಪ್ರತಿಫಲ ದೊರೆಯುತ್ತದೆ. ಕುಟುಂಬದಲ್ಲಿ ವಿವಾಹದ ಯೋಗವು ಕಂಡುಬರುತ್ತದೆ. ಸೋದರಿಯ ಕುಟುಂಬದ ವಿವಾದ ಒಂದನ್ನು ಸುಲಭವಾಗಿ ಬಗೆಹರಿಸುವಿರಿ. ನಿಮ್ಮ ಮನಸ್ಸಿಗೆ ಒಪ್ಪದ ಕೆಲಸವನ್ನು ಎಂದೂ ಮಾಡುವುದಿಲ್ಲ. ಹಣಕಾಸಿನ ವಿಚಾರದಲ್ಲಿ ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳಬೇಡಿರಿ. ವಿದ್ಯಾರ್ಥಿಗಳಿಗೆ ವಿಶೇಷವಾದಂತಹ ಸಹಾಯ ಎಲ್ಲರಿಂದಲೂ ದೊರೆಯುತ್ತದೆ. ಪಾಲುಗಾರಿಕೆಯ ವ್ಯಾಪಾರವೊಂದನ್ನು ಆರಂಭಿಸುರುವಿ. ಮುಂದಿನ ಭವಿಷ್ಯಕ್ಕಾಗಿ ಹಣದ ಉಳಿತಾಯಕ್ಕೆ ಯೋಜನೆ ರೂಪಿಸುವಿರಿ. ದೂರದ ಊರಿಗೆ ಪ್ರವಾಸ ಕೈಗೊಳ್ಳುವಿರಿ.

ವೃಶ್ಚಿಕ:
ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿ. ನಿಯಮಿತ ಆಹಾರ ಸೇವನೆಯಿಂದ ಅನೇಕ ತೊಂದರೆಗಳು ದೂರವಾಗಲಿವೆ. ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಗಳಿಸುವಿರಿ. ಕಷ್ಟಪಟ್ಟು ದುಡಿದಷ್ಟು ಉತ್ತಮ ಪ್ರತಿಫಲ ಮತ್ತು ಪ್ರತಿಕ್ರಿಯೆ ನಿಮ್ಮದಾಗುತ್ತದೆ. ಸ್ನೇಹಿತರ ಹಣದ ಸಹಾಯದಿಂದ ಸ್ವಂತ ಮನೆ ಕೊಳ್ಳುವ ಕನಸು ನನಸಾಗಲಿದೆ. ಧೈರ್ಯ ಸ್ಥೈರ್ಯದ ಗುಣಕ್ಕೆ ಎಲ್ಲರೂ ಮಾರು ಹೋಗುತ್ತಾರೆ. ದಾಂಪತ್ಯದಲ್ಲಿನ ಚಿಕ್ಕ ಸಮಸ್ಯೆಯನ್ನು ಸುಲಭವಾಗಿ ಪರಿಹಾರ ಗೊಳ್ಳಲಿದೆ. ಸಂತಾನ ಲಾಭವಿದೆ. ಕಣ್ಣಿನ ತೊಂದರೆ ಉಂಟಾಗಬಹುದು. ಹೈಪರ್ ಅಸಿಡಿಟಿಯ ಸಮಸ್ಯೆ ಸದಾ ಕಾಡಬಹುದು.

ಧನಸ್ಸು:
ಬೇರೆಯವರ ಮಾತಿಗೆ ಕಟ್ಟು ಬಿದ್ದು ದೂರದ ಊರಿಗೆ ಪ್ರಯಾಸ ಕೈಗೊಳ್ಳುವಿರಿ. ಆರೋಗ್ಯದಲ್ಲಿ ಏರಿಳಿತ ಉಂಟಾದರೂ ಯಾವುದೇ ತೊಂದರೆ ಕಂಡು ಬರದು. ಅನಿರೀಕ್ಷಿತ ಧನ ಲಾಭವಿದೆ. ಅದನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳಿರಿ. ಮುಂದಿನ ದಿನಗಳಿಗಾಗಿ ಹಣವನ್ನು ವಿವಿಧ ಯೋಜನೆಯಲ್ಲಿ ಹೂಡುವಿರಿ. ದೂರವಾಗಿದ್ದ ಬಂಧು ಒಬ್ಬರು ಮತ್ತೊಮ್ಮೆ ನಿಮ್ಮ ಆಶ್ರಯ ಬಯಸಿ ಬರುತ್ತಾರೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ವಿಶೇಷ ಸಾಧನೆಯನ್ನು ಮಾಡುತ್ತಾರೆ. ಚಿಕ್ಕ ಪುಟ್ಟ ವಿಚಾರಗಳಿಗೂ ಅನಾವಶ್ಯಕವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಪಾಲುಗಾರಿಕೆ ವ್ಯವಹಾರದಲ್ಲಿ ಉತ್ತಮ ಲಾಭ ಅಂಶ ದೊರೆಯಲಿದೆ.

ಮಕರ:
ಕುಟುಂಬದಲ್ಲಿ ಅನಾವಶ್ಯಕ ಭಿನ್ನಾಭಿಪ್ರಾಯಗಳು ಎದುರಾಗಲಿವೆ. ಈ ಕಾರಣದಿಂದಾಗಿ ಮಾನಸಿಕ ಒತ್ತಡ ಹೆಚ್ಚಾಗಿ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಮನೆಗೆ ಬೇಕಾದ ಅಲಂಕಾರಿಕ ಪದಾರ್ಥಗಳ ಖರೀದಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡುವಿರಿ. ಖರ್ಚು ವೆಚ್ಚಗಳನ್ನು ಕಡಿಮೆ ಮಾಡುವ ಅವಶ್ಯಕತೆ ಕಂಡು ಬರುತ್ತದೆ. ಹಿರಿಯ ಸೋದರ ಅಥವಾ ಸೋದರಿಯ ಜೊತೆಯಲ್ಲಿ ಪಾಲುಗಾರಿಕೆಯ ವ್ಯವಹಾರವನ್ನು ಆರಂಭಿಸಬಹುದು. ಹೊಗಳುವವರೆಲ್ಲರೂ ಆತ್ಮೀಯರು ಎಂಬ ಭಾವನೆಯಿಂದ ಹೊರಬನ್ನಿ. ಅತಿ ಮುಖ್ಯ ವಿಚಾರಗಳನ್ನು ರಹಸ್ಯವಾಗಿಡುವುದು ಒಳ್ಳೆಯದು. ಕೃಷಿಕರು ನೀರಿನ ಅನುಕೂಲತೆ ಪಡೆಯಲು ಹೆಚ್ಚಿನ ಹಣವನ್ನು ವಿನಿಯೋಗಿಸಬೇಕಾಗುತ್ತದೆ

ಕುಂಭ:
ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಮನಸ್ಸು ಒಪ್ಪುವುದಿಲ್ಲ. ಚಿಕ್ಕ ಪುಟ್ಟ ವಿಚಾರಗಳಿಗೂ ಬೇರೆಯವರನ್ನು ಆಶಯಿಸುವಿರಿ. ಹಣಕಾಸಿನ ವಿಚಾರದಲ್ಲಿ ನಿಮ್ಮ ಪ್ರಯತ್ನಕ್ಕೆ ತಕ್ಕಂತೆ ಫಲ ದೊರೆಯುತ್ತದೆ. ಸರಿಯಾದ ಮಾರ್ಗದಲ್ಲಿ ಕಾನೂನಿನ ವಿಚಾರವನ್ನು ಅರಿಯದೆ ಹಣವನ್ನು ಯಾವುದೇ ಚಟುವಟಿಕೆಯಲ್ಲಿ ತೊಡಗಿಸಬೇಡಿ. ಕುಟುಂಬದ ಸದಸ್ಯರು ನೀಡುವ ಸಲಹೆಗಳನ್ನು ಮೀರಿದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಮಾತ್ರ ಎಂದಿನಂತೆ ಕಷ್ಟಪಟ್ಟು ಅಭ್ಯಾಸದಲ್ಲಿ ನಿರತರಾಗುತ್ತಾರೆ. ಹೊಸ ವ್ಯಾಪಾರ ವ್ಯವಹಾರಗಳನ್ನು ಆರಂಭಿಸಲು ಇದು ಸರಿಯಾದ ವೇಳೆಯಲ್ಲ. ಅವಶ್ಯವಿದ್ದಲ್ಲಿ ತಂದೆ ಅಥವಾ ತಾಯಿಯಿಂದ ಹಣದ ಸಹಾಯ ದೊರೆಯಲಿದೆ.

ಮೀನ:
ಮಾತಿನಲ್ಲಿ ಮೋಡಿ ಮಾಡಬಲ್ಲ ಕಲೆ ನಿಮಗೆ ತಿಳಿದಿರುತ್ತದೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ತೋರುವ ಕಾರಣ ವೇಳೆಗೆ ತಕ್ಕಂತೆ ಆಹಾರವನ್ನು ಸೇವಿಸುವುದಿಲ್ಲ. ನಂಬಲು ಅನರ್ಹವಾದ ಮೂಲದಿಂದ ಹಣದ ಸಹಾಯ ದೊರೆಯುತ್ತದೆ. ಪ್ರಯತ್ನಪೂರ್ವಕವಾಗಿ ವಿದೇಶಕ್ಕೆ ತೆರಳುವ ಅವಕಾಶವನ್ನು ಪಡೆಯುವಿರಿ. ಹೆಚ್ಚಿನ ಆದಾಯದ ಆಸೆಗಾಗಿ ಉದ್ಯೋಗವನ್ನು ಬದಲಾವಣೆ ಮಾಡುವಿರಿ. ವಿದ್ಯಾರ್ಥಿಗಳು ಮನರಂಜನೆಯನ್ನು ಮರೆತು ಅಭ್ಯಾಸದಲ್ಲಿ ನಿರತರಾಗಬೇಕು. ಸ್ವಂತ ಮನೆಯನ್ನು ಕೊಳ್ಳುವ ಅಥವಾ ಕಟ್ಟಿಸುವ ಕೆಲಸಕ್ಕೆ ಸೋದರನ ಸಹಾಯವಿರುತ್ತದೆ. ಬಳಸುತ್ತಿರುವ ವಾಹನವನ್ನು ಮಾರಾಟ ಮಾಡಿ ಹೊಸ ವಾಹನವನ್ನು ಕೊಳ್ಳುವಿರಿ.

Leave a Comment

Your email address will not be published. Required fields are marked *