Ad Widget .

ರಷ್ಯಾ ನಿರ್ಮಿತ ಟಿ-55 ಯುದ್ಧ ಟ್ಯಾಂಕರ್ ಶಿವಮೊಗ್ಗ ಅಗಮಿಸಲಿದೆ

ಸಮಗ್ರ ನ್ಯೂಸ್: ಭಾರತ ಮತ್ತು ಬಾಂಗ್ಲಾ ನಡುವಣ ಯುದ್ಧದಲ್ಲಿ ದೇಶದ ಸೈನ್ಯ ಬಳಕೆ ಮಾಡಿದ್ದ ಟಿ-25 ಯುದ್ಧ ಟ್ಯಾಂಕರ್ ಇಂದು (ಆ. 12) ಶಿವಮೊಗ್ಗ ಆಗಮಿಸುತ್ತಿದೆ.

Ad Widget . Ad Widget .

ಶಿವಮೊಗ್ಗ ಮಹಾನಗರ ಪಾಲಿಕೆ ಮಾಡಿಕೊಂಡಿದ್ದ ಮನವಿಯ ಮೇರೆಗೆ ಯುದ್ಧ ಟ್ಯಾಂಕರ್ ಅನ್ನು ಅತ್ಯಂತ ಸುರಕ್ಷಿತ ಮತ್ತು ಗೌರವ ಪೂರ್ವಕವಾಗಿ ಸರ್ವಜನಿಕ ಪ್ರದರ್ಶನಕ್ಕೆ ಇಡಲಾಗುವುದು. ನಗರದ ಪ್ರಮುಖ ಸ್ಥಳಗಳಲ್ಲಿ ಇಡಲು ಮಂಜೂರಾತಿ ಸಿಕ್ಕಿದೆ.

Ad Widget . Ad Widget .

ಬಾಂಗ್ಲಾ ವಿರುದ್ಧ ಭಾರತವು ಗೆಲುವು ಸಾಧಿಸುವುದಕ್ಕೆ ಸಾಕಷ್ಟು ಪ್ರಮಾಣದಲ್ಲಿ ಸಹಾಯಕವಾಗಿದ್ದ ಯುದ್ದ ಟ್ಯಾಂಕರ್ ನಿಷ್ಕ್ರಿಯಗೊಂಡಿದೆ. ಹಾಗಾಗಿ ಯುದ್ದ ಟ್ಯಾಂಕರ್ ಅನ್ನು ಭಾರತೀಯ ರಕ್ಷಣಾ ಇಲಾಖೆಯು ಮಹಾರಾಷ್ಟ್ರದ ಪುಣೆಯ ರಕ್ಷಣಾ ಇಲಾಖೆ ಅಕಾಡೆಮಿಯಲ್ಲಿ ಸುರತಕ್ಷಿತವಾಗಿ ಇರಿಸಿ, ಸಾರ್ವಜನಿಕ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿತ್ತು.

ಯುದ್ಧ ಟ್ಯಾಂಕರ್ ಟಿ-೫೫ ಆಗಮನದ ಕುರಿತು ಹರ್ಷ ವ್ಯಕ್ತಪಡಿಸಿರುವ ಸಂಸದ ಬಿ.ವೈ.ರಾಘವೇಂದ್ರ ಅವರು, ನಮ್ಮ ಹೆಮ್ಮೆಯ ಸೇನಾ ಯುದ್ಧ ಟ್ಯಾಂಕ್ ಶಿವಮೊಗ್ಗ ನಗರಕ್ಕೆ ಬರುತ್ತಿದೆ. ಶಿವಮೊಗ್ಗ ನಗರದ ಎಂ.ಆರ್.ಎಸ್ ವೃತ್ತದಲ್ಲಿ ಸೇನಾ ಯುದ್ಧ ಟ್ಯಾಂಕ್ನ ಸ್ಮಾರಕ ನಿರ್ಮಾಣಗೊಳ್ಳುತ್ತಿದ್ದು ಇದು ನಮ್ಮೆಲ್ಲರ ಸ್ಫೂರ್ತಿಯ- ಹೆಮ್ಮೆಯ ತಾಣವಾಗಲಿದೆ. ಇದಕ್ಕಾಗಿ ನನ್ನೊಂದಿಗೆ ಅನೇಕರು ಶ್ರಮಿಸಿದ್ದಾರೆ. ವಿಶೇಷವಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯವರು, ಶಿವಮೊಗ್ಗ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಪುಣೆಯ ಕೇಂದ್ರೀಯ ಸಶಸ್ತ್ರ ಯುದ್ಧ ವಾಹನ ಸಂಗ್ರಹಾಲಯದ ಅಧಿಕಾರಿ ವರ್ಗ, ಮಹಾರಾಷ್ಟ್ರದಿಂದ ಶಿವಮೊಗ್ಗ ನಗರಕ್ಕೆ ತಂದು ಸ್ಥಾಪಿಸಲು ಅಧಿಕೃತವಾಗಿ ಮತ್ತು ಆರ್ಥಿಕವಾಗಿ ಬೆಂಬಲಿಸಿದ ಶಿವಮೊಗ್ಗ ನಗರ ಪಾಲಿಕೆಯ ಆಯುಕ್ತರು, ಮಹಾನಗರ ಪಾಲಿಕೆ ಮೇಯರ್ ಹಾಗೂ ಶಿವಮೊಗ್ಗ ನಗರದ ಶಾಸಕರೆಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *