ಸಮಗ್ರ ನ್ಯೂಸ್: ವಿದ್ಯಾರ್ಥಿನಿ ಸೌಜನ್ಯ ಕೊಲೆ,ಅತ್ಯಾಚಾರ ಪ್ರಕರಣದಲ್ಲಿ ಸತ್ಯ ಹೇಳಿದರೆ ನನ್ನನ್ನು ಮುಗಿಸಿ ಬಿಡುತ್ತಾರೆ ಎಂಬ ಹೇಳಿಕೆಯಿಂದ ಇದೀಗ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಉಲ್ಟಾ ಹೊಡೆದಿದ್ದಾರೆ.
ಪುತ್ತೂರಿನಲ್ಲಿ ಮಾತನಾಡಿದ ಅವರು ಸೌಜನ್ಯ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಿದ್ದೇ ನಾನು, ವಿಧಾನಸಭೆಯಲ್ಲಿ ಈ ಬಗ್ಗೆ ಒತ್ತಾಯ ಮಾಡಿರುವುದೇ ನಾನು, 6 ತಿಂಗಳು ಸಿಬಿಐ ಚೆನ್ನಾಗಿ ತನಿಖೆ ಮಾಡಿದೆ, ಆದರೆ 6 ತಿಂಗಳ ಬಳಿಕ ಸಿಬಿಐ ಕವಚಿ ಬಿದ್ದಿದ್ದು, ತಪ್ಪು ದಾರಿಯಲ್ಲಿ ಹೋಗಿದೆ.
ನನ್ನ ಪ್ರಕಾರ ಈ ಪ್ರಕರಣವನ್ನು ತನಿಖೆ ಮಾಡಿ ಆರೋಪಿಗಳ ಪತ್ತೆ ಹಚ್ಚಲು ಸಾಧ್ಯ, ಸಂದರ್ಭ ಬಂದಾಗ ಸೌಜನ್ಯ ವಿಚಾರದಲ್ಲಿ ಹೇಳಬೇಕಾದ ವಿಚಾರವನ್ನು ಹೇಳುತ್ತೇನೆ. ಆದರೆ ಸತ್ಯ ಹೇಳಿದರೆ ನನ್ನನ್ನು ಕೊಲ್ಲುತ್ತಾರೆ, ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು.
ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಆ ರೀತಿ ಮಾತೇ ಆಡಿಲ್ಲ ಎಂದ ಅವರು ಜೀವಂತವಾಗಿ ಯಾರಿಗೂ ನನ್ನನ್ನು ಕೊಲ್ಲಲು ಸಾಧ್ಯವಿಲ್ಲ, ಜಿಲ್ಲೆಯಲ್ಲಿ, ತಾಲೂಕಿನಲ್ಲಿ ಎಷ್ಟೇ ದೊಡ್ಡವರಿಗೂ ಒಬ್ಬನನ್ನು ಕೊಲ್ಲಲು ಸಾಧ್ಯವಿಲ್ಲ, ಬೆಳ್ತಂಗಡಿಯಲ್ಲಿ ನಡೆದ ಸಭೆಯಲ್ಲಿ ದೇವರು ನನ್ನನ್ನು ರಕ್ಷಣೆ ಮಾಡುತ್ತಾರೆ ಎಂದಿದ್ದೆ, ಆದರೆ ನನ್ನ ಮಾತನ್ನು ಮಾಧ್ಯಮಗಳ ತಿರುಚಿವೆ ಎಂದಿದ್ದಾರೆ.