ಸಮಗ್ರ ನ್ಯೂಸ್: ಏಶ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಮಲೇಶ್ಯ ತಂಡವನ್ನು 4-3 ಗೋಲುಗಳ ಅಂತರದಿಂದ ರೋಚಕವಾಗಿ ಮಣಿಸಿದ ಭಾರತ ತಾನಾಡಿದ 5ನೇ ಫೈನಲ್ ಪಂದ್ಯದಲ್ಲಿ ನಾಲ್ಕನೇ ಬಾರಿ ಪ್ರಶಸ್ತಿಗೆ ಮುತ್ತಿಟ್ಟಿದೆ.
ಮೇಯರ್ ರಾಧಾಕೃಷ್ಣನ್ ಸ್ಟೇಡಿಯಮ್‌ನಲ್ಲಿ ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಉಭಯ ತಂಡಗಳು ಕೊನೆಯ ತನಕ ತೀವ್ರ ಪೈಪೋಟಿ ನಡೆಸಿದವು. ಪಂದ್ಯವು 3-3ರಿಂದ ಸಮಬಲಗೊಂಡಿದ್ದಾಗ 56ನೇ ನಿಮಿಷದಲ್ಲಿ ಅಮೋಘ ಫೀಲ್ಡ್ ಗೋಲು ಗಳಿಸಿದ ಆಕಾಶದೀಪ್ ಸಿಂಗ್ ಭಾರತಕ್ಕೆ 4-3 ಮುನ್ನಡೆ ಒದಗಿಸಿಕೊಟ್ಟರು.
ಭಾರತದ ಪರ ಜುಗ್ರಾಜ್ ಸಿಂಗ್(9ನೇ ನಿಮಿಷ), ಹರ್ಮನ್‌ಪ್ರೀತ್ ಸಿಂಗ್(45ನೇ ನಿಮಿಷ) , ಗುರ್ಜಂತ್ ಸಿಂಗ್(45ನೇ ನಿಮಿಷ)ಹಾಗೂ ಆಕಾಶ್‌ದೀಪ್ ಸಿಂಗ್ (56ನೇ ನಿಮಿಷ) ತಲಾ ಒಂದು ಗೋಲು ಗಳಿಸಿದರು.
ಮಲೇಶ್ಯದ ಪರ ಅಬು ಕಮಲ್(14ನೇ ನಿಮಿಷ), ರಾಝಿ ರಹೀಂ(18ನೇ ನಿಮಿಷ) ಹಾಗೂ ಅಮಿನುದ್ದೀನ್ ಮುಹಮ್ಮದ್(28ನೇ ನಿಮಿಷ)ತಲಾ ಒಂದು ಗೋಲು ಗಳಿಸಿದರು.
ಭಾರತವು ಜುಗ್ರಾಜ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಗಳಿಸಿದ ಗೋಲಿನ ನೆರವಿನಿಂದ 3ನೇ ನಿಮಿಷದಲ್ಲಿ 1-0 ಮುನ್ನಡೆ ಸಾಧಿಸಿತು. ಆದರೆ ಮುಂದಿನ 23 ನಿಮಿಷಗಳಲ್ಲಿ ಎದುರಾಳಿ ಮಲೇಶ್ಯಕ್ಕೆ ಮೂರು ಗೋಲುಗಳನ್ನು ಬಿಟ್ಟುಕೊಟ್ಟಿತು. ಈ ಹಿನ್ನೆಲೆಯಲ್ಲಿ ಮೊದಲಾರ್ಧದ ಅಂತ್ಯಕ್ಕೆ 1-3 ಹಿನ್ನಡೆಯಲ್ಲಿತ್ತು.