ಸಮಗ್ರ ನ್ಯೂಸ್:ನಿರಂತರವಾಗಿ ಪರಿಸರದ ಮೇಲೆ ಉಂಟಾಗುತ್ತಿರುವ ದೌರ್ಜನ್ಯದಿಂದಾಗಿ ಪರಿಸರದಲ್ಲಿ ಬದುಕು ಕಟ್ಟಿಕೊಂಡಿರುವ ಜೀವ ಸಂಕುಲಗಳು ನಾಶವಾಗಿ, ಪರಿಸರದ ಸಮತೋಲನ ತಪ್ಪಿ ಹೋಗುತ್ತಿದೆ ಎಂದು ಆ.11ರಂದು ಮೂಲ್ಕಿಯ ಗೃಹರಕ್ಷಕ ದಳ ಕಛೇರಿ ಆವರಣದಲ್ಲಿ ಗಿಡ ನೆಡುವುದರ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಡಾ|| ಮುರಲೀ ಮೋಹನ್ ಚೂಂತಾರು ಹೇಳಿದರು.
ದ.ಕ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ||ಮುರಲೀ ಮೋಹನ್ ಚೂಂತಾರು ಜೈವಿಕ ಸರಪಳಿ ನಾಶವಾಗಿ ಹಲವಾರು ವಿರಳ ಗಿಡಸಸ್ಯಗಳು ಮತ್ತು ಪ್ರಾಣಿ ಸಂಕುಲಗಳು ನಾಶವಾಗಿ ಹೋಗುತ್ತಿದೆ. ಈ ನಿಟ್ಟಿನಲ್ಲಿ ನಾವೆಲ್ಲಾ ಕೂಡಲೇ ಎಚ್ಚೆತ್ತುಕೊಂಡು ಗಿಡಗಳನ್ನು ನೆಟ್ಟು ಮರಗಳನ್ನು ಪೋಷಿಸಿ ಪರಿಸರವನ್ನು ರಕ್ಷಿಸಬೇಕು. ಹಾಗಾದರೆ ಮಾತ್ರ ನಾಡು ಸಮೃದ್ಧವಾಗಿ ಕಾಲಕಾಲಕ್ಕೆ ಮಳೆ, ಬಿಸಿಲು ಸರಿಯಾಗಿ ದೊರಕಿ, ಪರಿಸರ ಮಾಲಿನ್ಯ ನಿವಾರಣೆಯಾಗಿ ಹಾಗೂ ಪರಿಸರ ನಾಶವಾಗುವುದು ತಪ್ಪಿ ಹೋಗಿ ಸದೃಢ, ಸುಭೀಕ್ಷ ನಾಡು ನಿರ್ಮಾಣವಾಗಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೂಲ್ಕಿ ಘಟಕದ ಪ್ರಭಾರ ಘಟಕಾಧಿಕಾರಿ ಲೋಕೇಶ್ ಹಾಗೂ ಗೃಹರಕ್ಷಕ, ಗೃಹರಕ್ಷಕಿಯರು ಉಪಸ್ಥಿತರಿದ್ದರು.