Ad Widget .

ಸಾಮಾಜಿಕ ಜಾಲತಾಣದಲ್ಲಿ ಗೆಳೆತನ ಬೆಳೆಸಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ| ಆಕೆಯೊಂದಿಗಿರುವ ಫೊಟೋ ವೈರಲ್ ಮಾಡಿದ ಆರೋಪಿ

ಸಮಗ್ರ ನ್ಯೂಸ್:Instagram ಮೂಲಕ ಪರಿಚಯವಾದ ವಿದ್ಯಾರ್ಥಿನಿಯ ಮನೆಯವರಿಗೆ ಕೆಲಸ ಕೊಡಿಸುವುದಾಗಿ ಹೇಳಿ ಲಾಡ್ಜ್‌ಗೆ ಕರೆದೊಯ್ದು ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದು, ಆಕೆಯೊಂದಿಗಿರುವ ಫೊಟೋಗಳನ್ನು ಇತರರಿಗೆ ಹಂಚಿ ಆ ಫೊಟೋಗಳನ್ನು ಅಳಿಸಿ ಹಾಕಬೇಕಿದ್ದರೆ ಹಣದ ಬೇಡಿಕೆಯನ್ನು ಮುಂದಿಟ್ಟ ಆರೋಪಿಯಾದ ಬೀದಿ ನಾಟಕ ಕಲಾವಿದನನ್ನು ಮಂಗಳೂರು ಮಹಿಳಾ ಠಾಣಾ ಪೊಲೀಸರು ಆ. 9ರಂದು ಬಂಧಿಸಿದ್ದಾರೆ.

Ad Widget . Ad Widget .

ರಾಯಚೂರು ಮೂಲದ ಯಮನೂರ (22) ಎಂದು ಗುರುತಿಸಲಾಗಿದ್ದು, ಆರೋಪಿಗೆ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನಗರದ ಇಂಜಿನಿಯರಿಂಗ್ ಕಾಲೇಜಿನ 19ರ ಹರೆಯದ ವಿದ್ಯಾರ್ಥಿನಿಯನ್ನು ಇನ್ಸ್ಟಾಗ್ರಾಮ್ ಮೂಲಕ ಗೆಳೆತನ ಮಾಡಿಕೊಂಡ ತನ್ನನ್ನು ವಾಮಂಜೂರು ಠಾಣೆಯ ಎಸ್ಸೈ ಎಂದು ಪರಿಚಯ ಮಾಡಿಕೊಂಡ. ಅಲ್ಲದೆ 2023ರ ಮೇ ತಿಂಗಳಲ್ಲಿ ನಗರದ ಕದ್ರಿ ದೇವಸ್ಥಾನದಲ್ಲಿ ಭೇಟಿ ಮಾಡಿ ಬಳಿಕ ತಣ್ಣೀರುಬಾವಿಯ ಬೀಚ್‌ಗೆ ಕರೆದೊಯ್ದು ಫೋಟೊ ತೆಗೆದುಕೊಂಡು ಬಳಿಕ ಅದನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದನು ಎಂದು ಆರೋಪಿಸಲಾಗಿದೆ.

Ad Widget . Ad Widget .

ಬೆಂಗಳೂರು ಮತ್ತು ಕಿನ್ನಿಗೋಳಿಯ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಲ್ಲದೆ ಆ ಫೋಟೊಗಳನ್ನು ಆಕೆಯ ಮನೆಯವರಿಗೆ ಮತ್ತು ಸ್ನೇಹಿತರ ಮೊಬೈಲ್‌ಗೆ ಕಳುಹಿಸಿರುವುದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾನೆ. ಈ ಫೋಟೊಗಳನ್ನು ಅಳಿಸಿ ಹಾಕಬೇಕಿದ್ದರೆ 1.50 ಲಕ್ಷ ರೂ. ನೀಡಬೇಕು ಎಂದು ಬೇಡಿಕೆಯನ್ನಿಟ್ಟಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Leave a Comment

Your email address will not be published. Required fields are marked *