Ad Widget .

KSRTC ಹಿರಿಮೆಗೆ ಮತ್ತೊಂದು ಗರಿ| ಈಗ ಏಷ್ಯಾದ ಅತ್ಯುತ್ತಮ ಉದ್ಯೋಗ ಸಂಸ್ಥೆ

ಸಮಗ್ರ ನ್ಯೂಸ್: ಕರ್ನಾಟಕದ ಹೆಮ್ಮೆಯ ಉದ್ಯಮಗಳಲ್ಲಿ ಕೆಎಸ್‌ಆರ್‌ಟಿಸಿ ಕೂಡ ಒಂದಾಗಿದ್ದು, ಸಾಕಷ್ಟು ದೊಡ್ಡ ಹೆಸರು ಗಳಿಸಿದೆ. ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಬಸ್‌ಗಳು ಎಷ್ಟೋ ಉತ್ತಮ. ಹೀಗೆ ಕಡಿಮೆ ಹಣದಲ್ಲೇ ಅತ್ಯುತ್ತಮವಾದ ಸೇವೆ ಕೊಡುವಲ್ಲಿ KSRTCಗೆ ದೊಡ್ಡ ಹೆಸರಿದೆ.

Ad Widget . Ad Widget .

ಇಂತಹ ಸಾರಿಗೆ ಸಂಸ್ಥೆಗೆ ಮತ್ತೊಂದು ಗರಿ ಸಿಕ್ಕಿದೆ. 2023ನೇ ಸಾಲಿನ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರ್ಯಾಂಡ್‌ಗೆ ಕೆಎಸ್‌ಆರ್‌ಟಿಸಿ ಆಯ್ಕೆಯಾಗಿದೆ. ಶಕ್ತಿ ಯೋಜನೆ ಬಳಿಕ ಕೆಎಸ್‌ಆರ್‌ಟಿಸಿ ಹೆಸರು ದೇಶದಲ್ಲಿ ಮಾತ್ರವಲ್ಲ ಜಗತ್ತಿನಲ್ಲಿ ಸದ್ದು ಮಾಡುತ್ತಿದೆ. ಇಷ್ಟುದಿನ ತನ್ನ ಉತ್ತಮ ಸೇವೆಯಿಂದಲೇ ಹೆಸರು ಗಳಿಸಿದ್ದ KSRTCಗೆ ಉಚಿತ ಬಸ್ ಸೇವೆ ಬಲ ತುಂಬಿದೆ ಎಂಬ ಮಾತು ಕೇಳಿಬರುತ್ತಿದೆ.

Ad Widget . Ad Widget .

ಇನ್ನು ಈ ಹೊತ್ತಲ್ಲೇ ಉದ್ಯೋಗ ಕಲ್ಪಿಸುವ ಉತ್ತಮ ಬ್ರ್ಯಾಂಡ್ ಆಗಿಯೂ ಕೆಎಸ್‌ಆರ್‌ಟಿಸಿ ಗುರುತಿಸಿಕೊಂಡಿದೆ. ನಿತ್ಯ ಕೋಟ್ಯಂತರ ಜನರು ಕೆಎಸ್‌ಆರ್‌ಟಿಸಿ ಬಸ್‌ಗಳನ್ನೇ ನಂಬಿ ತಮ್ಮ ನಿತ್ಯದ ಕೆಲಸಗಳಿಗೆ ತೆರಳುತ್ತಾರೆ. ಅದ್ರಲ್ಲೂ ಕರ್ನಾಟಕ ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ನಮ್ಮ ಕೆಎಸ್‌ಆರ್‌ಟಿಸಿಯ ಪಾತ್ರ ಹೆಮ್ಮೆಯದ್ದಾಗಿದೆ.

ಇನ್ನು 2023ನೇ ಸಾಲಿನ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರ್ಯಾಂಡ್‌ಗೆ ಕೆಎಸ್‌ಆರ್‌ಟಿಸಿ ಆಯ್ಕೆಯಾಗಿದ ಖುಷಿ ವಿಚಾರವನ್ನು ಸಂಸ್ಥೆ ಹಂಚಿಕೊಂಡಿದೆ. ‘ಕೆಎಸ್‌ಆರ್‌ಟಿಸಿ 2023ನೇ ಸಾಲಿನ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿಗೆ Asia’s Best Brand Employer Award ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮಗಳ ಅನುಷ್ಠಾನ ವರ್ಗದಲ್ಲಿ ಆಯ್ಕೆಯಾಗಿರುತ್ತದೆ. ಇಂದು 14ನೇ ಆವೃತ್ತಿಯ 18ನೇ ಉದ್ಯೋಗದಾತ ಬ್ರಾಂಡಿಂಗ್ ಪ್ರಶಸ್ತಿ ಪ್ರಕಟಿಸಲಾಗಿದ್ದು ನಿಗಮ ಈ ಪ್ರಶಸ್ತಿಗೆ ಆಯ್ಕೆಯಾಗಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್ 17ರಂದು ಸಿಂಗಾಪೂರ್ ನಲ್ಲಿ ನಡೆಯಲಿದೆ.’ ಎಂದು ಟ್ವೀಟ್ ಮಾಡಿದೆ.

Leave a Comment

Your email address will not be published. Required fields are marked *