Ad Widget .

ಮಹಿಳೆ ದೇಶದ ಮುಂದಿನ‌ ಪ್ರಧಾನಿ| ಸ್ಪೋಟಕ ಭವಿಷ್ಯ ನುಡಿದ ನೊಣವಿನಕೆರೆ ಯಶವಂತ ಗುರೂಜಿ

ಸಮಗ್ರ ನ್ಯೂಸ್: 2024 ರ ಲೋಕಸಭಾ ಚುನಾವಣೆ ಈಗಾಗಲೇ ರಾಜಕೀಯ ಪಕ್ಷಗಳು ಬರದ ಸಿದ್ದತೆ ನಡೆಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲ್ಲ, ರಾಷ್ಟ್ರ ರಾಜಕಾರಣದ ಚುಕ್ಕಾಣಿಯನ್ನು ಈ ಬಾರಿ ಮಹಿಳೆ ಹಿಡಿಯಲಿದ್ದಾಳೆ ಎಂದು ಯಶವಂತ ಗುರೂಜಿ ಭವಿಷ್ಯ ಅಚ್ಚರಿ ಭವಿಷ್ಯ ನುಡಿದಿದ್ದಾರೆ.

Ad Widget . Ad Widget .

ತುಮಕೂರಿನ ನೊಣವಿನಕೆರೆಯಲ್ಲಿ ಯಶವಂತ ಗುರೂಜಿ ಮಾತನಾಡಿ, ಮುಂದಿನ ಬಾರಿ ದೇಶದ ಚುಕ್ಕಾಣಿ ಮಹಿಳೆಯ ಕೈಗೆ ಹೋಗಲಿದೆ. ಮಹಿಳೆ ದೇಶವನ್ನು ಆಳ್ತಾಳೆ. ಮಾರ್ಚ್‌ ತಿಂಗಳ ಬಳಿಕ ಇದು ಶತಃಸಿದ್ಧ ಎಂದು ಕಾಲಜ್ಞಾನಿ ಡಾ ಯಶವಂತ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

Ad Widget . Ad Widget .

ಎರಡು ಬಾರೀ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು, ಮತ್ತೊಮ್ಮೆ ಪ್ರಧಾನಿಯಾಗಲ್ಲ, ಶಿವರಾತ್ರಿ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಬದಲಾವಣೆ ಸಂಭವಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. 35 ವರ್ಷಗಳ ಹಿಂದೆ ದೇಶವನ್ನು ಮಹಿಳೆ ಆಳಿದ್ದಳು. ಮಹಾಶಿವರಾತ್ರಿ ಹಬ್ಬದ ಬಳಿಕ ಶಕ್ತಿ ಸ್ವರೂಪವಾದ ಮಹಿಳೆ ದೇಶವನ್ನು ಆಳ್ತಾಳೆ ಎಂದು ಕಾಲಜ್ಞಾನದ ಭವಿಷ್ಯವಾಣಿ ಭವಿಷ್ಯವನ್ನು ಹೇಳುತ್ತಿದೆ.

2023 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ರಾಜ್ಯ ರಾಜಕಾರಣದ ಬಗ್ಗೆ ಭವಿಷ್ಯ ನುಡಿದಿದ್ದರು. ರಾಜ್ಯದಲ್ಲಿ ಕಾಂಗ್ರೆಸ್‌ ಅಲೆ ಇಲ್ಲದ ಸಂದರ್ಭದಲ್ಲಿಯೇ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತೆ. 135 ಸ್ಥಾನಗಳಿಂದ ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಯಶವಂತ್‌ ಗುರೂಜಿ ಹೇಳಿದ್ದರು. ಆ ಭವಿಷ್ಯ ನಿಜವಾಗಿದೆ. ಅದರ ಜೊತೆ ಮುಖ್ಯಮಂತ್ರಿ ಆಯ್ಕೆ ಗೊಂದಲದ ವೇಳೆ ಸಿದ್ದರಾಮಯ್ಯ ಅವರೇ ಮತ್ತೆ ಮುಖ್ಯಮಂತ್ರಿ ಆಗ್ತಾರೆ ಎಂದು ಭವಿಷ್ಯ ನುಡಿದಿದ್ದರು. ಆ ಭವಿಷ್ಯವಾಣಿ ಕೂಡ ನಿಜವಾಗಿದೆ.

Leave a Comment

Your email address will not be published. Required fields are marked *