ಸಮಗ್ರ ನ್ಯೂಸ್: ಭಾರತದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎನಿಸಿರುವ ಎಸ್ಬಿಐ ಜೂನ್ ಅಂತ್ಯದ ಕ್ವಾರ್ಟರ್ನಲ್ಲಿ ಭರ್ಜರಿ ಲಾಭ ಗಳಿಸಿದೆ. 2023ರ ಎಪ್ರಿಲ್ನಿಂದ ಜೂನ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 18,537 ಕೋಟಿ ರೂ ನಿವ್ವಳ ಲಾಭ ತೋರಿಸಿದೆ.
ಅಚ್ಚರಿ ಎಂದರೆ ಲಾಭದ ಓಟದಲ್ಲಿ ಎಸ್ಬಿಐ ಭಾರತದ ಅತಿದೊಡ್ಡ ಕಂಪನಿ ಮತ್ತು ಅತಿಹೆಚ್ಚು ಲಾಭದಾಯಕ ಸಂಸ್ಥೆ ಎನಿಸಿದ ರಿಲಾಯನ್ಸ್ ಇಂಡಸ್ಟ್ರೀಸ್ ಅನ್ನೇ ಮೀರಿಸಿದೆ. ಮುಕೇಶ್ ಅಂಬಾನಿ ಮಾಲಕತ್ವದ ಆರ್ಐಎಲ್ (RIL) ಸಂಸ್ಥೆಯ ತ್ರೈಮಾಸಿಕ ಅವಧಿಯ ನಿವ್ವಳ ಲಾಭ 16,011 ಕೋಟಿ ರೂ ಇದೆ. ಕಳೆದ 20 ವರ್ಷದಲ್ಲಿ ಲಾಭದ ವಿಚಾರದಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯನ್ನು ಎಸ್ಬಿಐ ಹಿಂದಿಕ್ಕಿರುವುದು ಇದು ಎರಡನೇ ಸಲ ಮಾತ್ರ.
ಈ ಹಿಂದೆ 2012-13ರ ಅವಧಿಯ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಇಂಡಿಯನ್ ಆಯಿಲ್ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯನ್ನು ಹಿಂದಿಕ್ಕಿತ್ತು. 2012 ಹಣಕಾಸು ವರ್ಷದ ಅಕ್ಟೋಬರ್ ಡಿಸೆಂಬರ್ ಅವಧಿಯ ಲಾಭಾಂಶದಲ್ಲಿ ಒಎನ್‌ಜಿಸಿ ರಿಲಯನ್ಸ್ ಹಿಂದಿಕ್ಕಿ ಮೊದಲ ಸ್ಥಾನ ಪಡೆದಿತ್ತು.