ಸಮಗ್ರ ನ್ಯೂಸ್:ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿ ಹೊತ್ತು ಸಾಗಲು ದಸರಾ ಗಜಪಡೆ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದ್ದು, ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ 9 ಗಜಪಡೆಯಲ್ಲಿ ಸ್ಥಾನ ನೀಡಲಾಗಿದೆ.
ಬೆಂಗಳೂರಿನ ಅಶೋಕಪುರದಲ್ಲಿರುವ ಅರಣ್ಯಭವನದಲ್ಲಿ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಜಿ.ವಿ ರಂಗರಾವ್ ಅಧ್ಯಕ್ಷತೆಯಲ್ಲಿನ ಸಭೆಯಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮೊದಲ ತಂಡದಲ್ಲಿ 9 ಆನೆಗಳು ಪಾಲ್ಗೊಳ್ಳಲಿವೆ. ಇವುಗಳಲ್ಲಿ ಏಳು ಗಂಡಾನೆ ಹಾಗೂ ಎರಡು ಹೆಣ್ಣಾನೆಗಳು ದಸರಾ ಮಹೋತ್ಸವದಲ್ಲಿ ಭಾಗಿಯಾಗಲಿದೆ.
ಗಜಪಡೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಹೆಣ್ಣಾನೆಗಳ ಗರ್ಭಧಾರಣಾ ಪರೀಕ್ಷಾ ವರದಿ ಬಾರದ ಕಾರಣ ಗಜಪಡೆ ಆಯ್ಕೆ ತಡವಾಗಿತ್ತು. ಆದರೇ ಸೋಮವಾರದಂದು ವರದಿ ಕೈ ಸೇರಿದೆ. ಈ ನಿಟ್ಟಿನಲ್ಲಿ ಗಜಪಡೆಯ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸೆ.1ಕ್ಕೆ ಗಜಪಯಣಕ್ಕೆ ಚಾಲನೆ ದೊರಕಲಿದೆ. ಸೆಪ್ಟೆಂಬರ್ 4ರಂದು ಗಜಪಡೆ ಅರಮನೆ ಪ್ರವೇಶ ಮಾಡಲಿದ್ದು, ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಜಂಬೂಸವಾರಿ ಮೆರವಣಿಗೆ ನಡೆಯಲಿದೆ.
ಮೈಸೂರು ದಸರಾದ ಗಜಪಡೆಗಳ ಮೊದಲ ಪಟ್ಟಿ:
ಅಭಿಮನ್ಯು – ಮತ್ತಿಗೋಡು ಆನೆ ಶಿಬಿರ
ಭೀಮ – ಮತ್ತಿಗೋಡು ಆನೆ ಶಿಬಿರ
ಮಹೇಂದ್ರ -ಮತ್ತಿಗೋಡು ಆನೆ ಶಿಬಿರ
ಅರ್ಜುನ -ಬಳ್ಳೆ ಆನೆ ಶಿಬಿರ
ಧನಂಜಯ – ದುಬಾರೆ ಆನೆ ಶಿಬಿರ
ಗೋಪಿ – ದುಬಾರೆ ಆನೆ ಶಿಬಿರ
ಪಾರ್ಥಸಾರಥಿ – ರಾಮಾಪುರ ಆನೆ ಶಿಬಿರ
ವಿಜಯಾ – ದುಬಾರೆ ಆನೆ ಶಿಬಿರ
ವರಲಕ್ಷ್ಮಿ – ಭೀಮನಕಟ್ಟೆ ಆನೆ ಶಿಬಿರ