Ad Widget .

ಸೌಜನ್ಯ ಅತ್ಯಾಚಾರ ಮತ್ತು ಪ್ರಕರಣ| ನ್ಯಾಯಕ್ಕಾಗಿ ಸುಳ್ಯದಲ್ಲಿ ಆ.8ರಂದು ವಾಹನ ಜಾಥಾ; ಬೃಹತ್ ಪ್ರತಿಭಟನಾ ಸಭೆ

ಸಮಗ್ರ ನ್ಯೂಸ್: ಧರ್ಮಸ್ಥಳ ಸಮೀಪದ ಪಾಂಗಾಳದಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಗೊಳಗಾದ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ತಾಲೂಕಿನಲ್ಲಿ ಕೂಡಾ ಪ್ರತಿಭಟನೆಯ ಅಲೆಗಳನ್ನು ಎಬ್ಬಿಸಿದ್ದು, ಸೌಜನ್ಯ ಪರ ಹೋರಾಟ ಸಮಿತಿ ರಚನೆಗೊಂಡಿದೆ.

Ad Widget . Ad Widget .

ಸಮಿತಿ ನೇತೃತ್ವದಲ್ಲಿ ಆ. 8ರಂದು ಸುಳ್ಯದ ನಿಂತಿಕಲ್ಲಿನಿಂದ ಸುಳ್ಯ ನಗರದವರೆಗೆ ವಾಹನ ಜಾಥಾ ಏರ್ಪಡಿಸಲಾಗಿದೆ. ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸೌಜನ್ಯ ತಾಯಿ ಕುಸುಮಾವತಿಯವರು ಭಾಗವಹಿಸಲಿದ್ದು, ಸುಳ್ಯ ನಗರದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ. ಬಳಿಕ ತಹಶಿಲ್ದಾರ್ ಮೂಲಕ ಸಿಎಂಗೆ ನ್ಯಾಯಕ್ಕಾಗಿ ಮನವಿ ಸಲ್ಲಿಸಲಾಗುತ್ತದೆ.

Ad Widget . Ad Widget .

Leave a Comment

Your email address will not be published. Required fields are marked *