Ad Widget .

ಹಿಟ್ ಆ್ಯಂಡ್ ರನ್ ಗೆ ತಂದೆ ಮತ್ತು‌ ಮಗ ಬಲಿ

ಸಮಗ್ರ ನ್ಯೂಸ್: ಹಿಟ್​ ಆಂಡ್ ರನ್ ಅಪಘಾತಕ್ಕೆ ತಂದೆ ಮತ್ತು‌ ಮಗ ಬಲಿಯಾಗಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಸದಾಶಿವನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಎಂಎಸ್ ರಾಮಯ್ಯ ಬಳಿಯ ಇಸ್ರೋ ಸರ್ಕಲ್​ನಲ್ಲಿ ಸಂಭವಿಸಿದೆ.

Ad Widget . Ad Widget .

ರಘು ಮತ್ತು ಚಿರಂಜೀವಿ ಮೃತ ತಂದೆ ಹಾಗೂ ಮಗ. ವಾಸು ಎಂಬವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೃತರು ಬೆಂಗಳೂರಿನ ಕುವೆಂಪು ನಗರದ ನಿವಾಸಿಗಳಾಗಿದ್ದು, ಪುಸ್ತಕ ವ್ಯಾಪಾರ ಮಾಡುತ್ತಿದ್ದರು. ರಾತ್ರಿ ಕೆಲಸ ಮುಗಿಸಿ ಹಿಂದಿರಗುವ ವೇಳೆ ಅಪಘಾತ ನಡೆದಿದೆ.

Ad Widget . Ad Widget .

ಎಂಎಸ್ ರಾಮಯ್ಯ ಅಸ್ಪತ್ರೆ ಕಡೆಯಿಂದ ಬಂದಿದ್ದ ಮಾರುತಿ ಇಕೋ ನಿಂತಿದ್ದ ಕಾರ್​ ಮತ್ತು ಆಟೋಗೆ ಡಿಕ್ಕಿ ಹೊಡೆದಿದೆ. ಮೊದಲು ರಸ್ತೆ ಬದಿ ನಿಂತಿದ್ದ ಒರ್ವನಿಗೆ ಹಾಗೂ ಡಿಯೋ ಸ್ಕೂಟರ್​ನಲ್ಲಿದ್ದ ಇಬ್ಬರಿಗೆ ಡಿಕ್ಕಿ ಹೊಡೆದಿದೆ.

ಇಬ್ಬರು ಎಸ್ಕೇಪ್, ಓರ್ವ ಸೆರೆ

ಅಪಘಾತದ ಬಳಿಕ ಸ್ಥಳೀಯರು ಕಾರ್ ತಡೆದು ನಿಲ್ಲಿಸಿದ್ದಾರೆ. ಮೂವರ ಪೈಕಿ ಇಬ್ಬರು ಕಾರ್ ಸಮೇತ ಎಸ್ಕೇಪ್ ಆಗಿದ್ದಾರೆ. ಆಕಾಶ್ ಎಂಬಾತನನ್ನು ಹಿಡಿಯುವಲ್ಲಿ ಸ್ಥಳೀಯರು ಯಶಸ್ವಿಯಾಗಿದ್ದು, ಪೊಲೀಸರ ವಶಕ್ಕೆ ನೀಡಿದ್ದಾರೆ.

Leave a Comment

Your email address will not be published. Required fields are marked *