Ad Widget .

ಸಿಬಿಐ ತನಿಖೆ ಆರಂಭದಲ್ಲೇ‌ ನಡೆದಿತ್ತು ಮಹಾಮೋಸ| ಸತ್ಯ ಹೇಳಿದ್ರೆ‌ ನನ್ನ ಕೊಲ್ಲಲು ಪ್ರಯತ್ನಿಸಬಹುದು| ಮಾಜಿ ಶಾಸಕ ವಸಂತ ಬಂಗೇರರಿಂದ ಸೌಜನ್ಯ ಪ್ರಕರಣ ಕುರಿತು ಶಾಕಿಂಗ್ ಹೇಳಿಕೆ

ಸಮಗ್ರ ನ್ಯೂಸ್: ಸೌಜನ್ಯ ಪ್ರಕರಣದಲ್ಲಿ ಸಿಬಿಐ ತನಿಖೆಯಿಂದಲ್ಲಿ ನ್ಯಾಯ ಸಿಗಬಹುದು ಎಂಬ ನಂಬಿಕೆಯಿತ್ತು. ಆದರೆ ಸತ್ಯ ಹೊರಬಂದಿಲ್ಲ, ಸಿಬಿಐ ತನಿಖೆ ಹಳಿ ತಪ್ಪಿದ ವಿಚಾರ ಆಗಲೇ ಗೊತ್ತಾಗಿತ್ತು. ತನಿಖೆಯಲ್ಲಿ ಏನಾಯಿತು ಎಂಬುದು ಗೊತ್ತಿದೆ. ಅದನ್ನು ಈಗ ಹೇಳುವುದಿಲ್ಲ. ಆದರೆ ಒಂದಲ್ಲ ಒಂದು ದಿನ ಅದಕ್ಕೆ ಕಾಲ ಬರುತ್ತೆ. ಯಾರು ಇದನ್ನು ತಪ್ಪಿಸಿದ್ದಾರೆ, ಯಾರು ಅನ್ಯಾಯ ಮಾಡಿದ್ದಾರೆ, ಯಾರು ತೊಂದರೆ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸುತ್ತೇನೆ. ಎಲ್ಲಿಯಾದರೂ ನನ್ನನ್ನು ಕೊಂದರೆ ಮುಗಿಯಿತು. ಇಲ್ಲವೆಂದರೆ ಎಲ್ಲವನ್ನೂ ಹೇಳುತ್ತೇನೆ, ನನ್ನ ಜೀವನದ ಅಂತ್ಯದೊಳಗೆ ಇದರ ಸತ್ಯ ಹೊರ ಬರಲಿದೆ ಎಂಬುದು ನನ್ನ ನಂಬಿಕೆಯಾಗಿದೆ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.

Ad Widget . Ad Widget .

ಅವರು ಬೆಳ್ತಂಗಡಿಯಲ್ಲಿ ರವಿವಾರ ಸಂಗಾತಿ ಮಹಾಸಂಗಮ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.ಈ ಎಲ್ಲ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖಾಸಗಿಯಾಗಿ ಭೇಟಿಯಾಗಿ ಮಾತುಕತೆ ನಡೆಸುತ್ತೇನೆ. ಎಲ್ಲ ವಿಚಾರಗಳನ್ನು ಅವರಿಗೆ ತಿಳಿಸುತ್ತೇನೆ. ಅಧಿಕಾರಿಗಳು ಸೇರಿದಂತೆ ಇಂತವರನ್ನೇ ತನಿಖೆ ಮಾಡಬೇಕು ಎಂದು ಹೇಳುತ್ತೇನೆ. ಆಗ ಸತ್ಯ ಹೊರಬರುತ್ತೆ ಎಂಬ ವಿಚಾರವನ್ನು ಮುಂದಿಡುತ್ತೇನೆ. ನನ್ನ ಜೀವಿತ ಅವಧಿಯಲ್ಲಿಯೇ ಇದರ ಸತ್ಯ ಹೊರಬರುವುದನ್ನು ನೋಡುತ್ತೇನೆ ಎಂಬ ವಿಶ್ವಾಸವಿದೆ ಎಂದರು.

Ad Widget . Ad Widget .

ಸೌಜನ್ಯ ಪ್ರಕರಣದಲ್ಲಿ ಮರು ತನಿಖೆಯಾಗಿ ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗುವವರೆಗೆ ಹೋರಾಟದಿಂದ ವಿರಮಿಸುವುದಿಲ್ಲ. ಎಲ್ಲ ಮಹಿಳೆಯರೂ ಒಟ್ಟಾಗಿ ನ್ಯಾಯಕ್ಕಾಗಿ ಹೋರಾಟ ಮುಂದುವರಿಸಬೇಕಾಗಿದೆ ಎಂದು ಅವರು ಹೇಳಿದರು.

ಸೌಜನ್ಯಳ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಆರಂಭದಿಂದಲೂ ನೊಂದವರ ಪರವಾಗಿ ಧ್ವನಿಯೆತ್ತಿದ್ದೇನೆ ಅಂದು ವಿಧಾನಸಭೆಯಲ್ಲಿ ವಿಚಾರವನ್ನು ಪ್ರಸ್ತಾಪಿಸಿ ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸಿದ್ದೆ, ವಿಧಾನಸಭೆಯಲ್ಲಿ ವಿಚಾರ ಪ್ರಸ್ತಾಪ ಮಾಡದಂತೆ ಭಾರೀ ಒತ್ತಡ ಬಂದಿತ್ತು ಆದರೆ ವಿಚಾರ ಪ್ರಸ್ತಾಪಿಸಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಇಡೀ ಘಟನೆಯ ಬಗ್ಗೆ ಹಾಗೂ ಇನ್ನೂ ಹಲವು ವಿಚಾರಗಳನ್ನು ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಚರ್ಚಿಸಿದ್ದೆ. ಅವರಿಗೆ ಸೌಜನ್ಯ ಪ್ರಕರಣ ಹಾಗೂ ಅದಕ್ಕಿಂತ ಹಿಂದಿನ ಹಲವು ವಿಚಾರಗಳ ಬಗ್ಗೆ, ಕೊಲೆ ಪ್ರಕರಣಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಿದ್ದೆ. ಅದಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಬಿಐ ತನಿಖೆಗೆ ಒಪ್ಪಿಸಿದ್ದರು. ಆದರೆ ಅಲ್ಲಿಯೂ ಸತ್ಯ ಹೊರಬರಲಿಲ್ಲ. ಇದೀಗ ಪ್ರಕರಣದ ಬಗ್ಗೆ ಮರು ತನಿಖೆ ಅಗತ್ಯವಿದೆ. ಅದಕ್ಕಾಗಿ ಮುಖ್ಯಮಂತ್ರಿಯವರ ಬಳಿ ಕುಟುಂಬಸ್ಥರೊಂದಿಗೆ ಹೋಗಿ ಮರುತನಿಖೆಗೆ ಮನವಿ ಸಲ್ಲಿಸಿದ್ದೇನೆ. ಸರಕಾರ ಮರು ತನಿಖೆಗೆ ಆದೇಶ ನೀಡುವ ಭರವಸೆಯಿದೆ‌ ಎಂದರು.

ತಪ್ಪು ಮಾಡಿದವರು ಯಾರೇ ಆಗಲಿ ಎಷ್ಟೇ ಪ್ರಭಾವಶಾಲಿಗಳಾಗಲಿ ಅವರಿಗೆ ಶಿಕ್ಷೆಯಾಗಬೇಕು. ಅವರನ್ನು ಕಾನೂನಿನ ಮುಂದೆ ತರಬೇಕು ಅದಕ್ಕಾಗಿ ಇಡೀ ಸಮಾಜ ಒಟ್ಟಾಗಿ ಧ್ವನಿಯೆತ್ತಬೇಕಾಗಿದೆ ಎಂದು ಅವರು ಹೇಳಿದರು.

Leave a Comment

Your email address will not be published. Required fields are marked *