ಸುಳ್ಯ: ಓಮ್ನಿ ಡಿಕ್ಕಿ ಹೊಡೆದು ಪಾದಾಚಾರಿ ಸಾವು

ಸಮಗ್ರ ನ್ಯೂಸ್: ಪಾದಾಚಾರಿಗೆ ಓಮಿನಿ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಸುಳ್ಯ ತಾಲೂಕಿನ ಅರಂತೋಡಿನಿಂದ ವರದಿಯಾಗಿದೆ.

Ad Widget ... ..

ಮೃತಪಟ್ಟ ವ್ಯಕ್ತಿಯನ್ನು ಅರಂತೋಡು ಗ್ರಾಮದ ಉಳುವಾರು ತೀರ್ಥರಾಮ ಎಂದು ಗುರುತಿಸಲಾಗಿದೆ. ಮೀನು ವ್ಯಾಪಾರಕ್ಕೆಂದು ಹೋಗುತ್ತಿದ್ದ ಓಮಿನಿ ಕಾರು, ಪಾದಾಚಾರಿ ಉಳುವಾರು ನಿವಾಸಿ ತೀರ್ಥರಾಮ ಎಂಬುವರಿಗೆ ಡಿಕ್ಕಿ ಹೊಡೆದಿದ್ದು ಗಂಭೀರ ಗಾಯಗಳಾಗಿದ್ದು , ಗಾಯಾಳುವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರೆಂದು ಹೇಳಲಾಗಿದೆ. ಅವರು ಕೃಷಿಕರಾಗಿದ್ದು ಪತ್ನಿ ಪುತ್ರ ಹಾಗು ಓರ್ವ ಪುತ್ರಿಯನ್ನು ಅಗಲಿದ್ದಾರೆ.

Ad Widget

Leave a Comment

Your email address will not be published. Required fields are marked *