Ad Widget .

ಸೌಜನ್ಯ ಕುಟುಂಬದ ಪರ ನಿಂತ ಕಾಂಗ್ರೆಸ್| ನ್ಯಾಯ ಕೇಳುವುದೂ ಧರ್ಮವೇ…ಎಂದು ಟ್ವೀಟ್

ಸಮಗ್ರ ನ್ಯೂಸ್: ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಅಪ್ರಾಪ್ತ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಸೌಜನ್ಯ ಕುಟುಂಬಕ್ಕೆ ರಕ್ಷಣೆ ನೀಡುವುದಾಗಿ ಹೇಳಿಕೊಂಡಿದೆ.

Ad Widget . Ad Widget .

‘ಸೌಜನ್ಯಾ ಕುಟುಂಬದ ರಕ್ಷಣೆಗೆ ನಮ್ಮ ಸರಕಾರ ಬದ್ಧವಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ. ಧರ್ಮವೆಂದರೆ ನ್ಯಾಯ, ನ್ಯಾಯವನ್ನು ಕೇಳುವುದು ಕೂಡ ಧರ್ಮವೇ. ಸೌಜನ್ಯಾ ಕುಟುಂಬದ ರಕ್ಷಣೆಗೆ ನಮ್ಮ ಸರ್ಕಾರ ಬದ್ದವಾಗಿದೆ. ಸಂತ್ರಸ್ತ ಕುಟುಂಬದ ಮೇಲಿನ ಹಲ್ಲೆ, ಬೆದರಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ನೊಂದ ಕುಟುಂಬದ ಮೇಲೆ ದಬ್ಬಾಳಿಕೆ ನಡೆಸುವುದನ್ನು ಧರ್ಮ ಎನ್ನಲಾಗದು. ಪೊಲೀಸರು ಸೌಜನ್ಯ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಲಿದ್ದಾರೆ’ ಎಂದು ಟ್ವೀಟ್ ಮಾಡಲಾಗಿದೆ.

Ad Widget . Ad Widget .

ಸೌಜನ್ಯಾ ಪ್ರಕರಣದಲ್ಲಿ ಧರ್ಮಸ್ಥಳದ ಅವಹೇಳನ ಮಾಡಲಾಗುತ್ತಿದೆ ಎಂದು ಉಜಿರೆಯಲ್ಲಿ ಧರ್ಮಸ್ಥಳ ಭಕ್ತವೃಂದದಿಂದ ಉಜಿರೆ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ರಥಬೀದಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆದಿತ್ತು. ಈ ವೇಳೆ ಜಸ್ಟಿಸ್ ಫಾರ್ ಸೌಜನ್ಯಾ ಫ್ಲಕ್ಸ್ ಕಾರ್ಡ್ ಹಿಡಿದು ಅಲ್ಲಿಗೆ ಬಂದ ಸೌಜನ್ಯಾ ತಾಯಿ ಕುಸುಮಾವತಿ, ಸೌಜನ್ಯಾ ಸಹೋದರ ಜಯರಾಂಗೆ ಹಲ್ಲೆ ಯತ್ನ ನಡೆದಿತ್ತು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *