ಸುಳ್ಯ: ಕಳ್ಳತನ ಹೀಗೂ ಮಾಡಬಹುದಾ!? ದನದ ಕೊಟ್ಟಿಗೆಗೆ ನುಗ್ಗಿ ಕದ್ದು ಹಾಲು ಕರೆದ‌ ಮಹಿಳೆ

ಸಮಗ್ರ ನ್ಯೂಸ್: ದನದ ಕೊಟ್ಟಿಗೆಗೆ‌ ನುಗ್ಗಿ ಕದ್ದು ಹಾಲು‌ ಕರೆದು ಸಿಕ್ಕಿಬಿದ್ದ ಘಟನೆ ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ಕರಿಕ್ಕಳ ಎಂಬಲ್ಲಿ‌ ನಡೆದಿದೆ. ಕಳ್ಳತನದ ರೀತಿಯೇ ವಿಚಿತ್ರವಾಗಿದ್ದು ಈ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.

Ad Widget ... ..

ಕರಿಕ್ಕಳದ ಮನೆಯೊಂದರಲ್ಲಿ ಮಹಿಳೆಯೊಬ್ಬರು ಹಲವು ವರ್ಷಗಳಿಂದ ಹಾಲು ಕರೆಯುವ ಕೆಲಸದಲ್ಲಿದ್ದು ಅವರೇ ಡೈರಿಗೆ ಕೊಂಡೊಯ್ಯುತಿದ್ದರೆನ್ನಲಾಗಿದೆ. ಇತ್ತೀಚೆಗೆ ಆ ಮಹಿಳೆ 4-5 ದಿನ ರಜೆ ಮಾಡಿದ್ದರು. ಈ ಸಂದರ್ಭ‌ ಮನೆಯವರು ಹಾಲು ಕರೆಯುವ ಕೆಲಸಕ್ಕೆ ಬೇರೊಂದು ವ್ಯಕ್ತಿಯನ್ನು ಕೆಲಸಕ್ಕೆ ನೇಮಿಸಿದ್ದರೆನ್ನಲಾಗಿದೆ. ಆದರೆ ಹೊಸದಾಗಿ ನೇಮಕಗೊಂಡ ಹಾಲು ಕರೆಯುವವನಿಗೆ ಮಾಮೂಲಿನಷ್ಟು ಹಾಲು ಸಿಗಲಿಲ್ಲ ಎನ್ನಲಾಗಿದೆ.

Ad Widget

ಯಾಕೆ ಹೀಗಾಯಿತು ಎಂದು ಚಿಂತೆಗೊಳಗಾದ ಮಾಲೀಕ ಹೊಸದಾಗಿ ಸೇರಿದಾತ ದನದ ಕೆಚ್ಚಲು ಮಾಮೂಲಿನಂತೆ ಇರುವುದಿಲ್ಲ ಯಾರೋ ಹಾಲು ಕರೆಯುತ್ತಿದ್ದಾರೆಂದು ದನದ ಮಾಲಕರಲ್ಲಿ ದೂರಿಕೊಂಡಿದ್ದರು. ಇದನ್ನು ಆಧರಿಸಿ ಮನೆಯವರು ಹಟ್ಟಿಗೆ ಹಾಕಿದ್ದ ಸಿ.ಸಿ ಕ್ಯಾಮರಾ ಪರಿಶೀಲನೆ ಮಾಡಿದಾಗ ಪ್ರಾತ: ಕಾಲ 4 – 5 ಗಂಟೆಗೆ ಮಹಿಳೆಯೊಬ್ಬರು ಬಂದು ದನದ ಕೆಚ್ಚಲಿನಿಂದ ಅರ್ಧ ಹಾಲು ಕರೆದು ಹೋಗುತ್ತಿರುವ ದೃಶ್ಯ ಸೆರೆಯಾಗಿರುವುದಾಗಿ ಕಂಡುಬಂತು.

ಈ ಬಗ್ಗೆ ಮನೆ ಮಾಲೀಕರು ಹಾಲು ಕದಿಯುವ ವಿಚಾರದ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿದು ಬಂದಿದೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *