ಸಮಗ್ರ ನ್ಯೂಸ್: ನಾಯಿ ನುಂಗಿದ ಬೃಹತ್ ಗಾತ್ರದ ಹೆಬ್ಬಾವನ್ನು ರಕ್ಷಣೆ ಮಾಡಿ ಪಟ್ಟಿಘಾಟ್ ಮೀಸಲು ಅರಣ್ಯಕ್ಕೆ ಬಿಡಲಾಯಿಇತು.

ಸಂಪಾಜೆ ವಲಯದ ದಬ್ಬಡ್ಕ ಗ್ರಾಮದ ಪನೇಡ್ಕ ಸುಧಾ ಎಂಬುವವರ ಜಾಗದಲ್ಲಿ ಇದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಕೃಷ್ಣ ಕಡೆಪಾಲ ಮತ್ತು ನಾರಾಯಣ ಕಡೆಪಾಲ ಇವರ ನೆರವಿನಿಂದ ಸೆರೆಹಿಡಿದು ಪಟ್ಟಿಘಾಟ್ ಮಿಸಲು ಅರಣ್ಯಕ್ಕೆ ಬಿಡಲಾಯಿತು. ಕಾರ್ಯಾಚರಣೆಯಲ್ಲಿ ದಬ್ಬಡ್ಕ ಉಪ ವಲಯದ ಸಿಬ್ಬಂದಿ ಪಾಲ್ಗೊಂಡರು.