Ad Widget .

ಪಾರ್ಲೆ-ಜಿ ಬಿಸ್ಕೆಟ್ ಪ್ಯಾಕೆಟ್ ನಲ್ಲಿರುವ ಮುದ್ದಾದ ಬಾಲೆ ಯಾರು‌ ಗೊತ್ತಾ?|ಈ ಪ್ರಶ್ನೆಗೆ ಉತ್ತರ ಇಲ್ಲಿದೆ

ಸಮಗ್ರ ನ್ಯೂಸ್: ಪಾರ್ಲೆ-ಜಿ (Parle-G) ಬಿಸ್ಕೆಟ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಪ್ರಸ್ತುತ ಕಾಲಘಟ್ಟದಲ್ಲಿ ವಿಭಿನ್ನ ಬಿಸ್ಕೆಟ್​​ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಹೆಚ್ಚಿನವರು ಪಾರ್ಲೆ-ಜಿ ಬಿಸ್ಕೆಟನ್ನೇ ಇಷ್ಟಪಡುತ್ತಾರೆ. ಈ ಬಿಸ್ಕೆಟ್ ಕವರ್ ನಲ್ಲಿ ಪುಟ್ಟ ಹುಡುಗಿಯೊಬ್ಬಳ ಮುದ್ದಾದ ಚಿತ್ರವಿದೆ.

Ad Widget . Ad Widget .

ವಿಶ್ವದಲ್ಲೇ ಅತೀ ಹೆಚ್ಚು ಮಾರಾಟವಾಗುವ ಈ ಬಿಸ್ಕೆಟ್ 12 ಕೆಲಸಗಾರರೊಂದಿಗೆ ಪ್ರಾರಂಭವಾಗಿತ್ತು. ಈಗ ಈ ಬಿಸ್ಕೆಟ್ ಕಂಪೆನಿಯು ಪ್ರತಿವರ್ಷ 8000 ಕೋಟಿ ಮೌಲ್ಯ ಬಿಸ್ಕೆಟ್​​ಗಳನ್ನು ಮಾರಾಟ ಮಾಡುತ್ತಿರುವುದು ದಾಖಲೆ ಅಂತಾನೇ ಹೇಳಬಹುದು. ಈ ಬಿಸ್ಕೆಟ್ ಪೊಟ್ಟಣದಲ್ಲಿ ಒಬ್ಬ ಪುಟ್ಟ ಬಾಲಕಿಯ ಮುದ್ದಾದ ಚಿತ್ರವಿದೆ. ಈ ಹುಡುಗಿ ಯಾರು ಎಂಬ ಗೊಂದಲ ಅನೇಕರಲ್ಲಿದೆ. ಈ ಪುಟ್ಟ ಹುಡುಗಿ ಯಾರು? ಎಂಬ ಪ್ರಶ್ನೆಗೆ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

Ad Widget . Ad Widget .

ಪಾರ್ಲೆಜಿ ಬಿಸ್ಕೆಟ್ ಪೊಟ್ಟಣದಲ್ಲಿರುವ ಪುಟ್ಟ ಹುಡುಗಿಯ ಚಿತ್ರ ಯಾರಾದ್ದಾಗಿರಬಹುದು ಎಂದು ದಶಕಗಳಿಂದ ಜನರ ಮನಸ್ಸಿನಲ್ಲಿ ಓಡಾಡುತ್ತಿರುವ ಒಂದು ಪ್ರಶ್ನೆಯಾಗಿದೆ. ಇದು ಇನ್ಫೋಸಿಸ್ ಅಧ್ಯಕ್ಷೆ ಸುಧಾ ಮೂರ್ತಿ ಅವರ ಬಾಲ್ಯದ ಚಿತ್ರ ಎಂದು ಹಲವರು ನಂಬಿದ್ದರು. ಕೆಲವರು ಇದನ್ನು ನೀರು ದೇಶಪಾಂಡೆ ಹಾಗೂ ಇನ್ನೂ ಕೆಲವರು ಆ ಚಿತ್ರದಲ್ಲಿರುವ ಬಾಲಕಿ ಗುಂಜನ್ ದುಂಡಾನಿಯಾ ಎಂದು ನಂಬಿದ್ದರು. ಆದರೆ ಇದೀಗ ಈ ನಿಗೂಢ ಹುಡುಗಿಯ ರಹಸ್ಯಕ್ಕೆ ತೆರೆ ಮೇಲೆ ಬಿದ್ದಿದೆ.

ಈ ಬಿಸ್ಕೆಟ್ ಪೊಟ್ಟದಲ್ಲಿರುವ ಹುಡುಗಿಯ ಚಿತ್ರ ಯಾರ ನೈಜ ಚಿತ್ರವಲ್ಲ. ಇದೊಂದು ಕಾಲ್ಪನಿಕ ಚಿತ್ರವಾಗಿದ್ದು, ಇದನ್ನು 1960 ರಲ್ಲಿ ಎವರೆಸ್ಟ್ ಕ್ರಿಯೇಟಿವ್ ಕಲಾವಿದ ಮಗನ್ ಲಾಲ್ ದಹಿಯಾ ರಚಿಸಿದ್ದು ಎಂದು ಪಾರ್ಲೆ ಜಿ ಗ್ರೂಪ್ ಪ್ರೋಡಕ್ಟ್ ಮ್ಯಾನೇಜರ್ ಮಯಾಂಕ್ ಷಾ ಅವರು ಹೇಳಿದ್ದಾರೆ.

Leave a Comment

Your email address will not be published. Required fields are marked *