Ad Widget .

ಕೊಟ್ಟಿಗೆಹಾರ: ನಿಡುವಾಳೆ ಗ್ರಾ.ಪಂ.ಅಧ್ಯಕ್ಷೆಯಾಗಿ ಬಿ.ಗುಲಾಬಿ, ಉಪಾಧ್ಯಕ್ಷರಾಗಿ ನವೀನ್ ಹಾವಳಿ ಅಯ್ಕೆ

ಸಮಗ್ರ ನ್ಯೂಸ್: ಬಾಳೂರು ಹೋಬಳಿಯ ನಿಡುವಾಳೆ ಗ್ರಾಮ ಪಂಚಾಯತ್‌ ಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು.ನೂತನ ಅಧ್ಯಕ್ಷರಾಗಿ ಬಿ.ಗುಲಾಬಿ ಹಾಗೂ ಉಪಾಧ್ಯಕ್ಷರಾಗಿ ನವೀನ್ ಹಾವಳಿ ಅವಿರೋಧವಾಗಿ ಆಯ್ಕೆಯಾದರು.‌

Ad Widget . Ad Widget .

ಗ್ರಾಮ ಪಂಚಾಯತ್‌ ಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡದ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಅಭ್ಯರ್ಥಿಯ ಮೀಸಲು ಹಂಚಿಕೆಯಂತೆ ಚುನಾವಣೆ ನಡೆಯಿತು.ಚುನಾವಣಾ ಅಧಿಕಾರಿಯಾಗಿ ಬಣಕಲ್ ಕೃಷಿ ಅಧಿಕಾರಿ ಎಂ.ಆರ್.ವೆಂಕಟೇಶ್ ಭಾಗವಹಿಸಿದ್ದರು. ಉಪಾಧ್ಯಕ್ಷ ನವೀನ್ ಹಾವಳಿ ಮೊದಲ ಅವಧಿಯ ಚುನಾವಣೆಯಲ್ಲಿ ಚಪ್ಪಲಿ ಗುರುತಿನಲ್ಲಿ ಚುನಾವಣೆ ಸ್ಪರ್ಧಿಸಿ ಪ್ರತಿಯೊಬ್ಬ ಗ್ರಾಮಸ್ಥರ ಮನೆಗೂ ಕಾಲಿಗೆ ಚಪ್ಪಲಿ ಹಾಕದೇ ಮತಯಾಚಿಸಿ ವಿಜೇತರಾಗಿ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದರು .ಮತ್ತೇ ಎರಡನೆ ಅವದಿಗೂ ಉಪಾಧ್ಯಕ್ಷರಾಗಿ ಮರು ಆಯ್ಕೆಯಾಗಿರುವುನ್ನು ಇಲ್ಲಿ ಸ್ಮರಿಸಬಹುದಾಗಿದೆ.

Ad Widget . Ad Widget .

ಅಭಿನಂದನಾ ಸಮಾರಂಭದಲ್ಲಿ ಅಧ್ಯಕ್ಷೆ ಬಿ.ಗುಲಾಬಿ ಮಾತನಾಡಿ’ ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರು,ಬೀದಿ ದೀಪ,ವಸತಿ, ಸೌಚಾಲಯ ಸೇರಿದಂತೆ ಮೂಲ ಸೌಲಭ್ಯಕ್ಕೆ ಒತ್ತು ಕೊಡಲಾಗುವುದು.ಯಾವುದೇ ಅಭಿವೃದ್ದಿ ಕಾರ್ಯಗಳಿಗೂ ಸರ್ವ ಗ್ರಾಮಸ್ಥರ ಸಹಕಾರ ಮುಖ್ಯ’ ಎಂದರು. ಈ ಸಂದರ್ಭದಲ್ಲಿ ಸದಸ್ಯರಾದ ಸಚಿನ್,ಶೃತಿ,ಲಕ್ಷ್ಮಿ, ಅರುಣ್,ಕಾರ್ಯದರ್ಶಿ ಸವಿತಾ, ಪಿಡಿಒ ಎಲ್.ಜೆ ಮಹೇಶ್ ಹಾಗೂ ಗ್ರಾ.ಪಂ.ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಇದ್ದರು.

Leave a Comment

Your email address will not be published. Required fields are marked *