ಸಮಗ್ರ ನ್ಯೂಸ್: ಕಾಂಗ್ರೆಸ್ ಸರ್ಕಾರವು ಗೃಹ ಜ್ಯೋತಿ ಯೋಜನೆಯಡಿ ಫ್ರೀ ಕರೆಂಟ್ ಕೊಡುತ್ತಿದ್ದು, 199 ಯೂನಿಟ್ವರೆಗೆ ಬಳಸಿದರೂ ಫ್ರೀ. ಈ ಖುಷಿಯ ಕಾಲದಲ್ಲಿ ಇಂಧನ ಇಲಾಖೆಯು ಕೆಲವರಿಗೆ ಶಾಕ್ ಕೊಟ್ಟಿದೆ.
ರಾಜ್ಯದಲ್ಲಿ 2 ಕೋಟಿ 14 ಲಕ್ಷ ಜನ ಗೃಹ ಜ್ಯೋತಿ ಯೋಜನೆಗೆ ಅರ್ಹರಾಗಿದ್ದು, 1 ಕೋಟಿ 42 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದು, 200 ಯುನಿಟ್ ಮೇಲೆ ಬಳಸುತ್ತಿರುವವರು ಈ ತಿಂಗಳು 150 ಯುನಿಟ್ ಬಳಸಿದರೂ ಬಿಲ್ ಕಟ್ಟಬೇಕಂತೆ. 2022ರ ಏ. 1ರಿಂದ 2023ರ ಮಾ. 31 ರವರೆಗೆ ಬಳಸಿದ ವಿದ್ಯುತ್ ಆ್ಯವರೇಜ್ ಆಧರಿಸಿ ಬಿಲ್ ಕೊಡಲಾಗುತ್ತಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಬೆಸ್ಕಾಂ ಎಂಡಿ ಮಹಾಂತೇಶ್ ಬೀಳಗಿ, ಸರ್ಕಾರದ ಆದೇಶ ಪ್ರತಿ ಮನೆಗೆ ಪ್ರತಿ ತಿಂಗಳಿಗೆ 200 ಯೂನಿಟ್ಗಳ ಒಳಗಿನ ಬಳಕೆಯ ಮಿತಿಯೊಳಗೆ ಕಳೆದ ಆರ್ಥಿಕ ವರ್ಷದಲ್ಲಿ ಸರಾಸರಿ ವಿದ್ಯುತ್ ಬಳಕೆ ಏನಿದೆ ಅದರ ಮೇಲೆ ಶೇಕಡಾ 10 ರಷ್ಟು ವಿದ್ಯುತ್ ಬಳಕೆಗೆ ಅವಕಾಶ ನೀಡಲಾಗಿದೆ. ಇದಕ್ಕೆ ಅನುಗುಣವಾಗಿ ನಾವು ಉಚಿತ ವಿದ್ಯುತ್ ಬಿಲ್ ನೀಡಲಾಗುವುದು ಎಂದು ತಿಳಿಸಿದ್ದಾರೆ. ಅಂದರೆ ಹಿಂದಿನ ಆರ್ಥಿಕ ವರ್ಷದಲ್ಲಿ ಬಳಸಿದ ಸರಾಸರಿ ವಿದ್ಯುತ್ ಬಳಕೆ 200 ಯೂನಿಟ್ಗಿಂತ ಹೆಚ್ಚು ಇದ್ದರೆ ಅವರು ಈ ಯೋಜನೆ ಅರ್ಹತೆ ಹೊಂದಿರುವುದಿಲ್ಲ ಎಂದು ಬೆಸ್ಕಾಂ ಎಂಡಿ ಸ್ಪಷ್ಟಪಡಿಸಿದ್ದಾರೆ.
199 ಯೂನಿಟ್ ಬಳಸುತಿದ್ದು ಹೆಚ್ಚುವರಿ 10% ಬಳಸಿದರು ಬಿಲ್ ಕಟ್ಟಬೇಕು. ಏಕೆಂದರೆ 200 ಯೂನಿಟ್ಗಿಂತ ಒಂದೇ ಒಂದು ಯೂನಿಟ್ ಹೆಚ್ಚು ಬಳಸಿದರೂ ಗೃಹಜ್ಯೋತಿ ಯೋಜನೆಯ ಲಾಭ ಸಿಗುವುದಿಲ್ಲ. ಸರಾಸರಿ ಬಳಕೆ ಮೇಲೆ 10% ಹೆಚ್ಚುವರಿ ಸೇರಿದರೂ 200 ಯೂನಿಟ್ ಮೀರಬಾರದು ಎಂಬುದು ಇಂಧನ ಇಲಾಖೆಯ ನಿಯಮವಾಗಿದೆ.
ಮತ್ತಷ್ಟು ಜನರನ್ನು ಈ ಯೋಜನೆಗೆ ನೋಂದಣಿ ಮಾಡಿಸಿ ಎಂದು ಎಸ್ಕಾಂ ಅಧಿಕಾರಿಗಳಿಗೆ ತಿಳಿಸಲಾಗಿದೆ. ರಾಜ್ಯದಲ್ಲಿ 2 ಕೋಟಿ 14 ಲಕ್ಷ ಜನ ಯೋಜನೆಗೆ ಅರ್ಹರಾಗಿದ್ದು, 1 ಕೋಟಿ 42 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಉಳಿದ 66 ಲಕ್ಷ ಜನರು ನೋಂದಣಿ ಮಾಡಿಸಬೇಕಿದ್ದು, ಅದಕ್ಕಾಗಿ ಈ ತಿಂಗಳಲ್ಲಿ ಪ್ರಚಾರ ಮಾಡಿಸಲಾಗುತ್ತಿದೆ.