Ad Widget .

ಶಾಲಾ ಪ್ರವೇಶಕ್ಕೆ ಮಕ್ಕಳಿಗೆ ಆಧಾರ್ ಕಡ್ಡಾಯವಲ್ಲ: ಕೇಂದ್ರದಿಂದ ಸ್ಪಷ್ಟನೆ

ಸಮಗ್ರ ನ್ಯೂಸ್: ಮಕ್ಕಳ ಶಾಲಾ ಪ್ರವೇಶಕ್ಕೆ ಆಧಾರ್ ಕಡ್ಡಾಯವಲ್ಲ. ಆಧಾರ್ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಯಾವುದೇ ಮಗುವಿಗೆ ಶಾಲೆಗೆ ಪ್ರವೇಶ ನಿರಾಕರಿಸಬಾರದು ಎಂದು ಕೇಂದ್ರ ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

2018 ಮತ್ತು 2021ರಲ್ಲಿ ಈ ಕುರಿತು ಹಿಂದಿನ ಪ್ರಕಟಣೆಗಳನ್ನು ಪುನರುಚ್ಚರಿಸಿದ ಕೇಂದ್ರ, ಕೆಲವು ಶಾಲೆಗಳು ಇನ್ನೂ ಪ್ರವೇಶಕ್ಕಾಗಿ ಆಧಾರ್ ಕಡ್ಡಾಯವಾಗಿ ನೀಡಬೇಕು ಎಂದು ಒತ್ತಾಯಿಸುತ್ತಿರುವ ವರದಿಗಳ ಹಿನ್ನೆಲೆ ಈ ಸ್ಪಷ್ಟನೆ ನೀಡಿದೆ.

Ad Widget . Ad Widget . Ad Widget .

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, “ಶಿಕ್ಷಣವು ಸಂವಿಧಾನದ ಸಮಕಾಲೀನ ಪಟ್ಟಿಯಲ್ಲಿದೆ ಮತ್ತು ಹೆಚ್ಚಿನ ಶಾಲೆಗಳು ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ವ್ಯಾಪ್ತಿಗೆ ಬರುತ್ತವೆ. ಆದರೆ 05.09.2018 ರ ಸುತ್ತೋಲೆಯ ಪ್ರಕಾರ, ಆಧಾರ್ ಕಾರ್ಡ್ ಇಲ್ಲ ಎಂಬ ಕಾರಣಕ್ಕಾಗಿ ಮಕ್ಕಳಿಗೆ ಪ್ರವೇಶ ನಿರಾಕರಿಸಬಾರದು ಎಂದು ಹೇಳಿದರು.

Leave a Comment

Your email address will not be published. Required fields are marked *